ಬೆಳ್ತಂಗಡಿ: ಯುವಕನ ಅಸಹಜ ಸಾವು
Update: 2017-05-25 22:09 IST
ಬೆಳ್ತಂಗಡಿ,ಮೇ 22: ಯುವಕನೊಬ್ಬ ನದಿಗೆ ಬಿದ್ದು ಅಸಹಜವಾಗಿ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದ ಬಾವಲಿಗುಂಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಕೆರ್ಪುಂಜ ದರ್ಖಾಸು ಮನೆ ನಿವಾಸಿ ಸಿದ್ದು ಪೂಜಾರಿ ಎಂಬವರ ಪುತ್ರ ಸದಾನಂದ ಪೂಜಾರಿ (30) ಎಂಬವರೇ ಮೃತಪಟ್ಟವರು. ಇವರು ಬುಧವಾರ ರಾತ್ರಿ ಬಾವಲಿಗುಂಡಿ ಕಿಂಡಿ ಅನೆಕಟ್ಟಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಾತ್ ಕಾಲು ಜಾರಿ ಬಿದ್ದು ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ವೇಣೂರು ಪೋಲಿಸರು ಸ್ಥಳಕ್ಕಾಗಮಿಸಿ, ಪರೀಶಿಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.