ಬೈಕ್ ಢಿಕ್ಕಿ: ಪಾದಚಾರಿಗೆ ಗಾಯ
Update: 2017-05-25 22:33 IST
ಮಂಗಳೂರು, ಮೇ 25: ಪದವಿನಂಗಡಿ ಬಳಿಯ ಮೇರಿಹಿಲ್ ಬಳಿ ಗುರುವಾರ ಬೈಕ್ ಢಿಕ್ಕಿ ಹೊಡೆದು ಪಾದಚಾರಿ ನಾಗೇಶ್ (42) ಗಾಯಗೊಂಡಿದ್ದಾರೆ.
ಬಸ್ಸಿನಿಂದ ಇಳಿದು ರಸ್ತೆ ದಾಟಲು ಯತ್ನಿಸಿದಾಗ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಎಡ ಕಾಲಿಗೆ ಮೂಳೆ ಮುರಿತಕ್ಕೊಳಗಾಗಿ ಭುಜಕ್ಕೆ ಗುದ್ದಿದ ಗಾಯವಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.