ಹಳಿ ತಪ್ಪಿದ ಗೂಡ್ಸ್ ರೈಲು: ಅದಮಾರು ರೈಲ್ವೆ ಗೇಟ್ ಬಳಿ ಘಟನೆ
Update: 2017-05-25 22:36 IST
ಪಡುಬಿದ್ರಿ,ಮೇ 25: ಇಲ್ಲಿಗೆ ಸಮೀಪದ ಅದಮಾರು ಬಳಿ ಗೂಡ್ಸ್ ರೈಲು ಬೋಗಿ ಹಳಿ ತಪ್ಪಿ ಕಳಚಿ ಬೇರ್ಪಟ್ಟ ಘಟನೆ ಕೊಂಕಣರೈಲ್ವೇ ರೈಲ್ವೇ ಹಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಮುಂಬೈಯಿಂದ ಮಂಗಳೂರು ಕಡೆಗೆ ಸಂಚರಿಸುತಿದ್ದ ಗೂಡ್ಸ್ ರೈಲು ಎಂಜಿನಿಂದ ಪ್ರತ್ಯೇಕವಾಗಿ ನಿಂತಿದೆ.ಹಳಿಗಳಲ್ಲಿ ದೋಷ ಕಂಡುಬಂದಿರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಳಿತಪ್ಪಿದ ರೈಲನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ರೈಲ್ವೇ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಘಟನೆ ರೈಲ್ವೆ ಗೇಟ್ ಬಳಿ ನಡೆದಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಲ್ಲದೆ ಮಂಗಳೂರು ಕಡೆಯಿಂದ ಸಂಚರಿಸುವ ರೈಲನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.