×
Ad

ಪಿ.ಎಫ್.ಐ. ಫರಂಗಿಪೇಟೆ ವತಿಯಿಂದ ಉಚಿತ ಪುಸ್ತಕ ವಿತರಣೆ

Update: 2017-05-25 23:30 IST

ಪರಂಗಿಪೇಟೆ ಮೇ 25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ವಲಯದ ವತಿಯಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಶಾಲಾ ಸಾಮಗ್ರಿಯನ್ನು ವಿತರಿಸಲಾಯಿತು

ವಿಶ್ವಾಸ್ ಸಿಟಿ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಫ್.ಐ. ಫರಂಗಿಪೇಟೆ ವಲಯ ಅಧ್ಯಕ್ಷ ನಝೀರ್ ಹತ್ತನೇ ಮೈಲ್ ಕಲ್ಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಿ.ಎಫ್.ಐ.  ಬಂಟ್ವಾಳ ಜಿಲ್ಲಾದ್ಯಕ್ಷ ಇಜಾಝ್ ಅಹ್ಮದ್, ಫರಂಗಿಪೇಟೆ ಮಸೀದಿ ಅಧ್ಯಕ್ಷ ಎಫ್. ಮುಹಮ್ಮದ್ ಬಾವ, ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಅಧ್ಯಕ್ಷ ಶಾಹುಲ್ ಎಸ್.ಎಚ್.  ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.

ಎಸ್.ಡಿ.ಪಿ.ಐ. ಪುದು ವಲಯಾಧ್ಯಕ್ಷ ಸುಲೈಮಾನ್ ಮುಸ್ಲಿಯಾರ್, ರಿಯಾದ್ ನ ಇಂಡಿಯನ್ ಫ್ರೆಟರ್ನಿಟಿ ಪೋರಮ್  ಸದಸ್ಯ ಇಸ್ಮಾಯೀಲ್ ಇನೋಳಿ, ಮಾಜಿ ಗ್ರಾಪಂ ಸದಸ್ಯರಾದ ಇಕ್ಬಾಲ್ ಅಮೆಮಾರ್ ಉಪಸ್ಥಿತರಿದ್ದರು.

ಈ ಸಂದರ್ಭ ಇಬ್ಬರು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಹಾಗೂ ಸುಮಾರು 80 ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಶಾಲಾ ಸಾಮಗ್ರಿ ವಿತರಿಸಲಾಯಿತು. ದಲಿತ ಮುಖಂಡ, ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯ ಎಂ. ಕೂಸಪ್ಪರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಶರೀಫ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News