×
Ad

ಅಡ್ಡೂರು ಶಾಲಾ ಹಿತರಕ್ಷಣ ಸಮಿತಿಯಿಂದ ಶಾಸಕರಿಗೆ ಮನವಿ

Update: 2017-05-25 23:54 IST

ಅಡ್ಡೂರು, ಮೇ 25:  ಯು.ಪಿ.ಇಬ್ರಾಹೀಂ, ಅಹ್ಮದ್ ಬಾವಾ ಹಾಗೂ ಡಾ.ಇ.ಕೆ. ಸಿದ್ದೀಕ್ ನೇತೃತ್ವದಲ್ಲಿ ಶಾಲಾ ಹಿತರಕ್ಷಣ ಸಮಿತಿಯಿಂದ ಶಾಸಕ ಮೊಯ್ದಿನ್ ಬಾವಾ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ ಮಾತನಾಡಿ, ಅಳಿವಿನಂಚಿರುವ ಅಡ್ಡೂರು ಗ್ರಾಮದ ಸರಕಾರಿ ಶಾಲಾ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ಶಾಲಾ ಹಿತರಕ್ಷಣೆ ಸಮಿತಿ ರಚಿಸಿ ನಿರಂತರ ಕಾರ್ಯಚಟುವಟಿಕೆಯಿಂದ ಕಾರ್ಯರೂಪಕ್ಕೆ ತಂದು ಗ್ರಾಮದ ಶಾಲೆಗೆ ಹೆಚ್ಚಿನ ದಾಖಲಾತಿಗೊಳ್ಳುವಂತೆ ಶ್ರಮಿಸುತ್ತಿದ್ದು, ಅಕ್ಷರಕ್ರಾಂತಿ ಸಾಹಿತ್ಯ ಬಳಗವು ಜೊತೆಗೂಡಿದೆ ಎಂದರು.

ಅಡ್ಡೂರು ಶಾಲಾ ಹಿತರಕ್ಷಣ ಸಮಿತಿಯ ಅಧ್ಯಕ್ಷ ಡಾ.ಇ.ಕೆ.ಸಿದ್ದೀಕ್ ಮಾತನಾಡಿ, ನಮ್ಮ ಸರ್ಕಾರಿ ಶಾಲೆಯ ಪುನಶ್ಚೇತನಕ್ಕಾಗಿ ರೂಪಿಸಿದ್ದ  ಹಲವಾರು ಯೋಜನೆಗಳಲ್ಲಿ ವಾಹನ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಇನ್ನಿತರ ಮೂಲ ಭೂತ ಸೌಕರ್ಯ ಅಗತ್ಯವಿದ್ದು, ಸರಕಾರದ ಸೌಲಭ್ಯ ಒದಗಿಸಿ ಶಾಲಾ ಅಭಿವೃದ್ಧಿಗೆ ಸಹಕಾರ ನೀಡುವಂತೆ ಅವರು ಶಾಸಕರಿಗೆ ಮನವಿ ಮಾಡಿದರು.

ಗ್ರಾಪಂ ಸದಸ್ಯ ಅಹ್ಮದ್ ಬಾವಾ ಮಾತನಾಡಿ, ಶಾಲೆಯ ಏಳಿಗೆಗಾಗಿ ನಾವು ನಿರಂತರ ಪ್ರಯತ್ನ ಪಡುತ್ತಿದ್ದೇವೆ. ಇತರೆ ಸಂಘ-ಸಂಸ್ಥೆಗಳು ನಮ್ಮೊಂದಿಗೆ ಸಹಕಾರ ನೀಡುವ ಭರವಸೆ ನೀಡಿದೆ. ತಾವು ಕೂಡ ಆರ್ಥಿಕವಾಗಿ ಸಹಕಾರ ನೀಡಿ ನಮ್ಮ ಶಾಲೆ ಮೇಲೆತ್ತುವ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಅವರು ಹೇಳಿದರು.

ಬಳಿಕ ಶಾಸಕ ಬಿ.ಎ.ಮೊಯ್ದಿನ್ ಬಾವಾ ಮಾತನಾಡಿ, ಈ ಬಗ್ಗೆ  ಯು.ಪಿ.ಇಬ್ರಾಹಿಂ ಮೂಲಕ ಮಾಹಿತಿ ಲಭಿಸಿದ್ದು, ಅಡ್ಡೂರು ಗ್ರಾಮದ ಸರಕಾರಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತ ನೋಟ್ ಬುಕ್ ಸ್ವತಃ ತನ್ನ ಖರ್ಚಿನಿಂದ ನೀಡುವೆ. ಸರಕಾರಿ ಮೂಲಭೂತ ಸೌಕರ್ಯ ಲಭಿಸುವಂತೆ ತಾನು ನಿಗಾ ವಹಿಸುವೆ. ಶಾಲೆಗೆ ಬೇಕಾದ ಆರ್ಥಿಕ ನೆರವು ಕೂಡ ಸ್ವತಃ ತಾನೇ ನೀಡುವುದಾಗಿ ಅಡ್ಡೂರು ಶಾಲಾ ಹಿತರಕ್ಷಕ ಸಮಿತಿಗೆ ಸ್ಫೂರ್ತಿದಾಯಕ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಹಿತರಕ್ಷಣ ಸಮಿತಿಯ ಸದಸ್ಯ ಕೆಳಗಿನಕೆರೆ ಜಬ್ಬಾರ್, ಕ್ಯಾಪಂಸ್ ಫ್ರೆಂಫ್ ಆಫ್ ಇಂಡಿಯಾ ಅಡ್ಡೂರಿನ ಅಧ್ಯಕ್ಷ ನಿಝಾಮ್ ತೋಕೂರು, ಬರೆಯೋಣ ಬನ್ನಿ ಅಕ್ಷರಕ್ರಾಂತಿ ಸಾಹಿತ್ಯ ಒಕ್ಕೂಟದ  ಕಲಂದರ್ ಶಾಫೀ, ಅಡ್ಡೂರು ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News