​ಆತ್ಮಶಕ್ತಿ ತ್ರೈಮಾಸಿಕದ ಶಿಕ್ಷಣ ವಿಶೇಷಾಂಕ ಬಿಡುಗಡೆ

Update: 2017-05-26 14:08 GMT

ಮಂಗಳೂರು, ಮೇ 26: ವಿದ್ಯಾರ್ಥಿಗಳು ಜ್ಞಾನಶಕ್ತಿ ಬಳಸಿಕೊಂಡು ಸಮಾಜಕಟ್ಟುವ ಕಾಯಕ ಮಾಡಬೇಕು. ವಿದ್ಯಾರ್ಥಿ ದಿನಗಳಲ್ಲಿ ಯಾರಾದರೂ ಶಿಕ್ಷಣಕ್ಕೆ ನೆರವಾಗಿದ್ದರೆ ಅವರನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಆತ್ಮಶಕ್ತಿ ತ್ರೈಮಾಸಿಕ ವಿಶೇಷಾಂಕವನ್ನು ತರುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಪುರುಷೋತ್ತಮ ಪೂಜಾರಿ ಹೇಳಿದರು.

ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಆತ್ಮಶಕ್ತಿ ತ್ರೈಮಾಸಿಕ ಪತ್ರಿಕೆಯ ಶಿಕ್ಷಣ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ನಿರ್ದೇಶಕ ರಾಮದಾಸ್ ಮರೋಳಿ ಅಧ್ಯಕ್ಷತೆ ವಹಿಸಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಆತ್ಮಶಕ್ತಿ ಸಹಕಾರಿಯು ತನ್ನ ಲಾಭಾಂಶದ ಒಂದಂಶವನ್ನು ಟ್ರಸ್ಟ್ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. 13 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಸಂಸ್ಥೆಯು ಉತ್ತಮ ಕೊಡುಗೆಗಳನ್ನು ನೀಡುತ್ತಿರುವುದು ಎಲ್ಲರ ಮೆಚ್ಚುಗೆಗಳಿಸಿದೆ ಎಂದರು.

ಪತ್ರಿಕೆಯ ಪ್ರಧಾನ ಸಂಪಾದಕ ಕೆ.ವಾಮನ್ ವಿಶೇಷಾಂಕದ ಕುರಿತು ವಿವರಿಸಿದರು. ವೇದಿಕೆಯಲ್ಲಿ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಶೇಷಪ್ಪ ಅಮೀನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News