ಮಹಾರಾಷ್ಟ್ರ ಪೌರ ಚುನಾವಣೆ: ಭಿವಂಡಿ ಗೆದ್ದ ಕಾಂಗ್ರೆಸ್, ಪನ್ವೇಲ್ ಬಿಜೆಪಿ ಪಾಲು
Update: 2017-05-26 21:33 IST
ಮುಂಬೈ,ಮೇ 26: ಮೇ 24ರಂದು ನಡೆದಿದ್ದ ಮಹಾರಾಷ್ಟ್ರ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭಿವಂಡಿ ಮತ್ತು ಮಾಲೆಗಾಂವ್‌ಗಳಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದರೆ, ಪನ್ವೇಲ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ.
ಪನ್ವೇಲ್‌ನಲ್ಲಿ 78 ವಾರ್ಡ್‌ಗಳ ಪೈಕಿ 44ನ್ನು ಬಿಜೆಪಿ ಗೆದ್ದಿದ್ದು, ಆರು ವಾರ್ಡ್‌ಗಳಲ್ಲಿ ಭಾರೀ ಮತಗಳ ಅಂತರದೊಡನೆ ಮುಂದಿದೆ. ಬಿಜೆಪಿ ನಿಕಟ ಪ್ರತಿಸ್ಪರ್ಧಿ ಪಿಡಬ್ಲೂಪಿಐಗೆ ಕೇವಲ 17 ವಾರ್ಡ್‌ಗಳಲ್ಲಿ ಜಯ ಲಭಿಸಿದೆ. ಭಿವಂಡಿಯಲ್ಲಿ ಕಾಂಗ್ರೆಸ್ 32 ಸ್ಥಾನಗಳನ್ನು ಗೆದ್ದಿದ್ದು, 10 ಸ್ಥಾನಗಳಲ್ಲಿ ಮುಂದಿದೆ. ಬಿಜೆಪಿ 9 ಸ್ಥಾನಗಳನ್ನು ಗೆದ್ದಿದೆ. ಪ್ರಮುಖ ವಿಜೇತರಲ್ಲಿ ಬಿಜೆಪಿಯ ಮುಸ್ಲಿಂ ಅಭ್ಯರ್ಥಿ ಶಾಹಿನ್ ಸಿದ್ದಿಕಿ ಸೇರಿದ್ದಾರೆ.
ಮಾಲೆಗಾಂವ್‌ನಲ್ಲಿ 84 ವಾರ್ಡ್‌ಗಳ ಪೈಕಿ 28ನ್ನು ಗೆದ್ದಿರುವ ಕಾಂಗ್ರೆಸ 10ರಲ್ಲಿ ಮುಂದಿದೆ. ಎನ್‌ಸಿಪಿ 20 ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನೆ 11 ಮತ್ತು ಬಿಜೆಪಿ 3 ಸ್ಥಾನ ಗಳನ್ನು ಗೆದ್ದಿವೆ.