ಜಾರ್ಖಂಡ್‌ನಲ್ಲಿ ಮಾವೋವಾದಿಗಳ ದಾಳಿ: ರೈಲು ಸಂಚಾರದಲ್ಲಿ ವ್ಯತ್ಯಯ

Update: 2017-05-26 16:07 GMT

 ರಾಂಚಿ,ಮೇ 26: ಗುರುವಾರ ರಾತ್ರಿ ಬೊಕಾರೋ ಜಿಲ್ಲೆಯ ದುಮ್ರಿ ಬಿಹಾರ ರೈಲು ನಿಲ್ದಾಣ, ಗುಡ್ಸ್ ರೈಲಿನ ಇಂಜಿನ್ ಮತ್ತು ಇತರ ರೈಲ್ವೆ ಉಪಕರಣಗಳಿಗೆ ಮಾವೋವಾದಿ ಗಳು ಬೆಂಕಿ ಹಚ್ಚಿದ್ದು ,ಇದರಿಂದಾಗಿ ಪೂರ್ವ ಮಧ್ಯ ರೈಲ್ವೆಯ ಗೋಮೊ-ಬರ್ಕಾಕಾನಾ ವಿಭಾಗದಲ್ಲಿ ರೈಲುಗಳ ಸಂಚಾರದಲ್ಲಿ ಹಲವಾರು ಗಂಟೆಗಳ ಕಾಲ ವ್ಯತ್ಯಯವುಂಟಾಗಿತ್ತು.

 ಬಂದೂಕು ಇತ್ಯಾದಿ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಿತರಾಗಿ ರೈಲ್ವೆ ನಿಲ್ದಾಣಕ್ಕೆ ಲಗ್ಗೆ ಹಾಕಿದ ಸುಮಾರು ನೂರರಷ್ಟಿದ್ದ ಬಂಡುಕೋರರು ಸಿಬ್ಬಂದಿಗಳನ್ನು ಬಲವಂತದಿಂದ ಹೊರಕ್ಕೆ ಕಳುಹಿಸಿದ ಬಳಿಕ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮುನ್ನ ಇಂಜಿನ್ ಚಾಲಕನ ಬಳಿಯಿದ್ದ ವಾಕಿಟಾಕಿಯನ್ನು ಕಿತ್ತುಕೊಂಡಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿದವು.

ಹಿರಿಯ ಪೊಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾವೋವಾದಿಗಳಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News