​ಮೇ 29-31: ಯಕ್ಷಗಾನ, ಭರತನಾಟ್ಯ, ನಾಟಕ ಪ್ರದರ್ಶನ

Update: 2017-05-26 16:08 GMT

ಉಡುಪಿ, ಮೇ 26: ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠ ಹಾಗೂ ಕಾರ್ಕಳ ಹಂಡೆದಾಸ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಂಡೆ ಶ್ರೀ ಪಾದದಾಸರು ಮತ್ತು ಹಂಡೆ ಗುರುವೇದವ್ಯಾಸದಾಸರು ವಿರಚಿತ ಯಕ್ಷಗಾನ, ಸಂಕೀರ್ತನಾ ಭರತನಾಟ್ಯ ಮತ್ತು ಪೌರಾಣಿಕ ನಾಟಕ ಕಾರ್ಯಕ್ರಮವನ್ನು ಮೇ 29ರಿಂದ 31ರವರೆಗೆ ಪ್ರತಿದಿನ ಸಂಜೆ 7ಗಂಟೆಗೆ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.

ಮೇ 29ರಂದು ಸಂಜೆ 6:45ಕ್ಕೆ ಕಾರ್ಯಕ್ರಮವನ್ನು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು.

ಬಳಿಕ ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. 30ರಂದು ದೇವರನಾಮ ಸಂಕೀರ್ತನೆ ಆಧರಿಸಿದ ಭರತನಾಟ್ಯ ಪ್ರದರ್ಶನ ಜರಗಲಿದೆ. 31ರಂದು ಸಂಜೆ 6:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಎಸ್.ಎ.ಕೃಷ್ಣಯ್ಯ ಅವರಿಗೆ ‘ಕಡತ್ತಿಲಶ್ರೀ’(ತಾಡೋಲೆ ಹಾಗೂ ಕಡತಗಳ ಸಂರಕ್ಷಕರು) ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ‘ನಾರದಲೇಲೆ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳ ಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜಗೋಪಾಲ್ ಬಲ್ಲಾಳ್, ಕೆ.ಪ್ರಕಾಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News