ಜುಗಾರಿ: ಮೂವರ ಬಂಧನ
Update: 2017-05-26 22:23 IST
ಬೈಂದೂರು, ಮೇ 26: ಕಂಬದಕೋಣೆ ರಿಕ್ಷಾ ನಿಲ್ದಾಣದ ಹಿಂಬದಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ನಾವುಂದದ ಅದ್ರಮಾನ್, ರಾಜೇಶ್ ಹಾಗೂ ಅರೆಹೊಳೆ ಕ್ರಾಸ್‌ನ ರವೀಂದ್ರ ಮೊಗವೀರ ಎಂಬವರನ್ನು ಬೈಂದೂರು ಪೊಲೀಸರು ಬಂಧಿಸಿ, 1,600ರೂ. ನಗದು ವಶಪಡಿ ಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.