ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ
Update: 2017-05-26 22:25 IST
ಕುಂದಾಪುರ, ಮೇ 26: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಅಬಕಾರಿ ಪೊಲೀಸರು ಕಾಲ್ತೋಡು ಗ್ರಾಮದ ಕಬ್ಸೆ ದೇವರಹಕ್ಲು ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ರಜನಿಕಾಂತ್ (35) ಎಂದು ಗುರುತಿಸಲಾಗಿದೆ.
ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಈತನಿಂದ 11.520 ಲೀಟರ್ ಮದ್ಯ ಹಾಗೂ 11.760 ಲೀಟರ್ ಬೀರ್ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 36,775ರೂ. ಎಂದು ಅಂದಾಜಿಸಲಾಗಿದೆ.