ಡಿ.ಎಲ್.ಇಡಿ/ಡಿ.ಪಿ.ಇಡಿ ಕೋರ್ಸ್‌ಗೆ ಅರ್ಜಿ ಆಹ್ವಾನ
ಉಡುಪಿ, ಮೇ 26: 2017-18ನೇ ಸಾಲಿನ ಡಿ.ಎಲ್.ಇಡಿ/ಡಿ.ಪಿ.ಇಡಿ ಕೋರ್ಸ್‌ಗೆ ದಾಖಲಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರದಿಂದ ಮಾನ್ಯತೆ ಪಡೆದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಇರುವ ಸರಕಾರಿ ಕೋಟಾ ಸೀಟುಗಳಿಗೆ ಮೇ 26ರಿಂದ ಜೂ.18ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್-www.schooleducation.kar.nic.in. - ಭೇಟಿ ನೀಡಬಹುದು. ಇದರಲ್ಲಿ ಪ್ರತಿ ಜಿಲ್ಲೆಯಲ್ಲಿರುವ ಅಧಿಕೃತ ಟೀಚರ್ಸ್ ತರಬೇತಿ ಸಂಸ್ಥೆಗಳ ಹಾಗೂ ಅಲ್ಲಿ ಲಭ್ಯವಿರುವ ಸೀಟುಗಳು ಸಂಖ್ಯೆ ಇರುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಪ್ರತಿ ಜಿಲ್ಲೆಯ ಡಯಟ್‌ನ ಪ್ರಾಂಶುಪಾಲರನ್ನು ಅಥವಾ ಬೆಂಗಳೂರಿನಲ್ಲಿರುವ ಕೇಂದ್ರೀಕೃತ ಅಡ್ಮಿಷನ್ ಸೆಲ್‌ನ್ನು (ದೂರವಾಣಿ:080-22228805, 22483145) ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.