×
Ad

​ಕುಂದಾಪುರ: ಮರಳು ಲಭ್ಯ

Update: 2017-05-26 22:39 IST

ಉಡುಪಿ, ಮೇ 26: ಕುಂದಾಪುರ ತಾಲೂಕಿನ ನಾನ್ ಸಿಆರ್‌ಝಡ್ ವ್ಯಾಪ್ತಿಯ ಅಂಪಾರು-ಮೊಳಹಳ್ಳಿ ಗ್ರಾಮಗಳ ವಾರಾಹಿ ನದಿಯಲ್ಲಿರುವ ಮರಳು ಬ್ಲಾಕ್‌ನಲ್ಲಿ ಮರಳನ್ನು ತೆಗೆದು ಸರಕಾರಿ ಕಾಮಗಾರಿಗಳಿಗೆ ಹಾಗೂ ಕಡಿಮೆ ವೆಚ್ಚದ ಮನೆ ನಿರ್ಮಿಸುವ ಸಾರ್ವಜನಿಕರಿಗೆ ವಿತರಿಸಲು ಉಡುಪಿಯ ಕೆಆರ್‌ಐಡಿಎಲ್‌ಗೆ ಸರಕಾರ ಆದೇಶ ನೀಡಿದೆ.

ಅಂಪಾರು-ಮೊಳಹಳ್ಳಿ ಗ್ರಾಮಗಳ ವಾರಾಹಿ ನದಿಯಲ್ಲಿರುವ ಮರಳು ಬ್ಲಾಕ್‌ನಲ್ಲಿ ಮರಳುಗಾರಿಕೆಯನ್ನು ಈಗಾಗಲೇ ಪ್ರಾರಂಭಿಸಿದ್ದು, ಮರಳನ್ನು ಅಂಪಾರು ಗ್ರಾಮದ ಮರಳು ದಕ್ಕೆಯಿಂದ ಸಾಗಾಟ ಪರವಾನಿಗೆ ನೀಡಿ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ಅಂಪಾರು-ಮೊಳಹಳ್ಳಿ ಗ್ರಾಮಗಳ ವಾರಾಹಿ ನದಿಯಲ್ಲಿರುವ ಮರಳು ಬ್ಲಾಕ್‌ನಲ್ಲಿ ಮರಳುಗಾರಿಕೆಯನ್ನು ಈಗಾಗಲೇ ಪ್ರಾರಂಭಿಸಿದ್ದು, ಮರಳನ್ನು ಅಂಪಾರು ಗ್ರಾಮದ ಮರಳು ದಕ್ಕೆಯಿಂದ ಸಾಗಾಟ ಪರವಾನಿಗೆ ನೀಡಿ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಆದುದರಿಂದ ಮರಳಿನ ಅಗತ್ಯತೆ ಇರುವವರು ಕೆಆರ್‌ಐಡಿಎಲ್ ಉಡುಪಿ ಇವರಿಗೆ ರಾಜಧನ ಪಾವತಿಸಿ, ಸಾಗಾಟ ಪರವಾನಿಗೆ ಪಡೆದು ಮರಳನ್ನು ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಆರ್‌ಐಡಿಎಲ್ ಉಡುಪಿ ಇವರ ದೂರವಾಣಿ ಸಂಖ್ಯೆ: 0820-2574904/9480335761ನ್ನು ಸಂಪರ್ಕಿಸುವಂತೆ ಉಡುಪಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News