×
Ad

ಎಂಐಟಿ ಡೈಮಂಡ್ ಕಪ್ ಕ್ರಿಕೆಟ್: ಯುಡಿಸಿಎ, ಯುಸಿಎ, ಬ್ರಹ್ಮಾವರ ಮಡಿಲಿಗೆ ಪ್ರಶಸ್ತಿ

Update: 2017-05-26 22:46 IST

ಮಣಿಪಾಲ, ಮೇ 26: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ, ಮಣಿಪಾಲ ವಿವಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ಇವುಗಳ ಸಹಯೋಗದೊಂದಿಗೆ ನಡೆದ ಅಂತರ ವಲಯ ಹಾರ್ಡ್‌ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ತಂಡ 19 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿು.

 ಉಳಿದಂತೆ 14 ವರ್ಷದೊಳಗಿನವರ ವಿಭಾಗದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಹಾಗೂ 16 ವರ್ಷದೊಳಗಿನವರ ವಿಭಾಗದಲ್ಲಿ ಉಡುಪಿ ಕ್ರಿಕೆಟ್ ಅಸೋಸಿಯೇಶನ್ ತಂಡಗಳು ಪ್ರಶಸ್ತಿಯನ್ನು ಗೆದ್ದುಕೊಂಡವು.

14 ವರ್ಷ ಕೆಳಗಿನ ವಿಭಾಗ: ಮಣಿಪಾಲ ಎಂಡ್ ಪಾಯಿಂಟ್ ಮೈದಾನದಲ್ಲಿ ನಡೆದ ಫೆನಲ್‌ನಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಯುಡಿಸಿಎ ಬ್ರಹ್ಮಾವರ ತಂಡವನ್ನು ಏಳು ವಿಕೆಟ್‌ಗಳಿಂದ ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಬ್ರಹ್ಮಾಆವರ 59 ರನ್‌ಗಳಿಗೆ ಆಲೌಟಾದರೆ, ಕ್ರಿಕೆಟ್ ಸಂಸ್ಥೆ ಮೂರು ವಿಕೆಟ್‌ಗೆ ವಿಜಯಿ ರನ್ ಗಳಿಸಿತು. ವಿಜೇತ ತಂಡದ ಸಂಪತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಕೆಆರ್‌ಎಸ್‌ನ್ನು ಮಣಿಸಿದ ಯುಸಿಎ:  ಎಂಐಟಿ ಮೈದಾನದಲ್ಲಿ ನಡೆದ 16 ಕೆಳಗಿನ ವಿಭಾಗದ ಫೈನಲ್ ಪಂದ್ಯದಲ್ಲಿ ಉಡುಪಿ ಕ್ರಿಕೆಟ್ ಅಸೋಸಿಯೇಷನ್ ತಂಡ, ಕೆಆರ್‌ಎಸ್ ತಂಡವನ್ನು 28 ರನ್‌ಗಳಿಂದ ಪರಾಭವಗೊಳಿಸಿತು. ಯುಸಿಎ 28.3 ಓವರುಗಳಲ್ಲಿ 170 ರನ್‌ಗಳಿಸಿ ನಂತರ ಎದುರಾಳಿ ತಂಡವನ್ನು 142 ರನ್‌ಗಳಿಗೆ ಆಲೌಟ್ ಮಾಡಿತು.ಕೃಷ್ಣರಾಜ್  ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಎಂಐಟಿ ಮೈದಾನದಲ್ಲಿ ನಡೆದ 16 ಕೆಳಗಿನ ವಿಭಾಗದ ಫೈನಲ್‌ ಪಂದ್ಯದಲ್ಲಿ ಉಡುಪಿ ಕ್ರಿಕೆಟ್‌ ಅಸೋಸಿಯೇಷನ್‌ ತಂಡ, ಕೆಆರ್‌ಎಸ್‌ ತಂಡವನ್ನು 28ರನ್‌ ಗಳಿಂದ ಪರಾವಗೊಳಿಸಿತು.

ಯುಸಿಎ 28.3 ಓವರುಗಳಲ್ಲಿ 170 ರನ್‌ಗಳಿಸಿ ನಂತರ ಎದುರಾಳಿ ತಂಡವನ್ನು 142 ರನ್‌ಗಳಿಗೆ ಆಲೌಟ್ ಮಾಡಿತು. ಕೃಷ್ಣರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಚಕ್ರವರ್ತಿಗೆ ಸೋಲು:   19 ವರ್ಷದೊಳಗಿನ ವಿಭಾಗದಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್, ಕುಂದಾಪುರದ ಚಕ್ರವರ್ತಿ ಅಕಾಡಮಿಯನ್ನು ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಬ್ರಹ್ಮಾವರ ತಂಡ 30 ಓವರುಗಳಲ್ಲಿ 7ವಿಕೆಟ್‌ಗೆ 148 ರನ್ ಗಳಿಸಿ ಬಳಿಕ ಚಕ್ರವರ್ತಿ ತಂಡವನ್ನು 139 ರನ್‌ಗಳಿಗೆ ಆಲೌಟ್ ಮಾಡಿತು. ಬ್ರಹ್ಮಾವರ ತಂಡದ ಸ್ಪರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

 ಟೂರ್ನಿಯ ಉತ್ತಮ ಬ್ಯಾಟ್ಸ್‌ಮೆನ್‌ಗಳಾಗಿ ಬ್ರಹ್ಮಾವರದ ಪ್ರಣವ್ (14ರ ಹರೆಯ), ಕೆಆರ್‌ಎಸ್‌ನ ಆಶೀಷ್ (16), ಬ್ರಹ್ಮಾವರದ ಮಿಥುನ್ ಎಸ್ (19), ಉತ್ತಮ ಬೌಲರ್‌ಗಳಾಗಿ ಯುಡಿಸಿಎಯ ಆಶೀಷ್ (14), ಯುಸಿಎನ ಫೆಮಿನ್ಸ್ಟನ್ (16), ಬ್ರಹ್ಮಾವರದ  ಪ್ರೀ ತೀಶ್(19) ಬಹುಮಾನ ಪಡೆದರು.

ಟೂರ್ನಿಯ ಉತ್ತಮ ಬ್ಯಾಟ್ಸ್‌ಮೆನ್‌ಗಳಾಗಿ ಬ್ರಹ್ಮಾವರದ ಪ್ರಣವ್ (14ರ ಹರೆಯ), ಕೆಆರ್‌ಎಸ್‌ನ ಆಶೀಷ್ (16), ಬ್ರಹ್ಮಾವರದ ಮಿಥುನ್ ಎಸ್ (19), ಉತ್ತಮ ಬೌಲರ್‌ಗಳಾಗಿ ಯುಡಿಸಿಎಯ ಆಶೀಷ್ (14), ಯುಸಿಎನ ಫೆಮಿನ್ಸ್ಟನ್ (16), ಬ್ರಹ್ಮಾವರದ ಪ್ರೀತೀಶ್(19) ಬಹುಮಾನ ಪಡೆದರು.

ಸಮಾರೋಪ ಸಮಾರಂಭದಲ್ಲಿ ಎಂಐಟಿಯ ನಿರ್ದೇಶಕ ಡಾ.ಜಿ.ಕೆ. ಪ್ರಭು ವಿಜೇತರಿಗೆ ಬಹುಮಾನ ವಿತರಿಸಿದರು. ಉಳಿದಂತೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಡಾ. ಕೃಷ್ಣಪ್ರಸಾದ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್, ಎಂಐಟಿಯ ಜಂಟಿ ನಿರ್ದೇಶಕ ಬಿ.ಎಚ್.ವಿ.ಪೈ, ಅಮೃತ ಮಹೋತ್ಸವ ಸಮಿತಿಯ ರಮೇಶ್, ಎಂಐಟಿಯ ಡಾ. ವಿನೋದ್ ನಾಯಕ್, ಸತೀಶ್ ಮಲ್ಯ, ಜಯಕುಮಾರ್, ಬಾಲ ೃಷ್ಣ ಪರ್ಕಳ ಭಾಗವಹಿಸಿದ್ದರು.

ಸಮಾರೋಪ ಸಮಾರಂದಲ್ಲಿಎಂಐಟಿಯನಿರ್ದೇಶಕಡಾ.ಜಿ.ಕೆ.ಪ್ರು ವಿಜೇತರಿಗೆ ಬಹುಮಾನ ವಿತರಿಸಿದರು. ಉಳಿದಂತೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಅ್ಯಕ್ಷಡಾ.ಕೃಷ್ಣಪ್ರಸಾದ್, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮಂಗಳೂರು ವಲಯದ ಸಂಚಾಲಕ ಮನೋಹರ್‌ ಅಮೀನ್, ಎಂಐಟಿಯ ಜಂಟಿ ನಿರ್ದೇಶಕ ಬಿ.ಎಚ್.ವಿ.ಪೈ,ಅಮೃತ ಮಹೋತ್ಸವ ಸಮಿತಿಯ ರಮೇಶ್, ಎಂಐಟಿಯ ಡಾ.ವಿನೋದ್‌ನಾಯಕ್, ಸತೀಶ್‌ಮಲ್ಯ, ಜಯಕುಮಾರ್, ಬಾಲಕೃಷ್ಣಪ್ಪ ಭಾಗವಹಿಸಿದ್ದರು.

ಪಂದ್ಯಕೂಟದ ಸಂಯೋಜಕ ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ರಾವುದಾಸ್ ಮಧ್ವ ನಗರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News