ಕಾಸರಗೋಡು ಸಂಪೂರ್ಣ ವಿದ್ಯುದೀಕರಣ ಜಿಲ್ಲೆ: ನಾಳೆ ಘೋಷಣೆ

Update: 2017-05-26 18:38 GMT

 ಕಾಸರಗೋಡು, ಮೇ 26: ಜಿಲ್ಲೆಯಲ್ಲಿ ಸಂಪೂರ್ಣ ವಿದ್ಯುದೀಕರಣ ಯೋಜನೆ ಪೂರ್ಣಗೊಳಿಸಲಾಗಿದ್ದು, 8,188 ಮನೆಗಳ ವಿದ್ಯುದೀಕರಣ ಪೂರ್ಣಗೊಳ್ಳುವುದ ರೊಂದಿಗೆ ಜಿಲ್ಲೆಯು ಹೊಸ ದಾಖಲೆಗೆ ಪಾತ್ರವಾಗಿದೆ.

      173 ಹೊಸಲೈನ್ ಅಳವಡಿಸುವ ಮೂಲಕ 8,188 ಮನೆಗಳಿಗೆ ವಿದ್ಯುತ್ ತಲುಪಿಸಲಾಗಿದೆ. ಜಿಲ್ಲೆಯ ಕೆಲ ಅರಣ್ಯ ಮೂಲಕ ಹಾಗೂ ಭೂಗರ್ಭ ವಿದ್ಯುತ್ ಕೇಬಲ್‌ಲೈನ್ ಅಳವಡಿಸಬೇಕಾಗಿ ಬಂದಿದೆ. ಉದುಮ ವಿಧಾನಸಭಾ ಕ್ಷೇತ್ರದಲ್ಲಿ 2,332, ತ್ರಿಕ್ಕರಿಪುರ 1,436, ಕಾಸರಗೋಡು 886, ಕಾಞಂಗಾಡ್ 2,506, ಮಂಜೇಶ್ವರ ವಿಧಾನಸಭಾ ಕ್ಷೇತ್ರದ 1,028 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಎ.30ರೊಳಗೆ ಅರ್ಜಿ ಸಲ್ಲಿಸಿದವರಿಗೆಲ್ಲ ಸಂಪರ್ಕ ನೀಡಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಪೂರ್ಣ ವಾಗಿ ಉಚಿತವಾಗಿ ಸಂಪರ್ಕವನ್ನು ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ಸಂಪರ್ಕಕ್ಕಾಗಿ ತಲಾ 1 ಕೋ. ರೂ. ಕೆಎಸ್‌ಇಬಿ ಒದಗಿಸಿದೆ. ಇದರೊಂದಿಗೆ ಸಂಸದ, ಶಾಸಕರ ನಿ, ಸ್ಥಳೀಯ ಸಂಸ್ಥೆ ಗಳ ಅನುದಾನವೂ ಒಳಗೊಂಡಿದೆ. ಸಂಪೂರ್ಣ ವಿದ್ಯುದೀಕರಣವನ್ನು ಮೇ 28ರಂದು ಅಪರಾಹ್ನ 3ಕ್ಕೆ ಉದುಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿದ್ಯುತ್‌ಸಚಿವ ಎಂ.ಎಂ. ಮಣಿ ಘೋಷಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News