ಚೂರಿ ಇರಿತಕ್ಕೊಳಗಾದ ಹಾಶಿರ್ ಭೇಟಿಯಾದ ಮುಸ್ಲಿಮ್ ಸಂಘಟನೆಗಳ ಒಕ್ಕೂಟ
Update: 2017-05-27 10:43 IST
ಮಂಗಳೂರು, ಮೇ 27: ಕಲ್ಲಡ್ಕದಲ್ಲಿ ಶುಕ್ರವಾರ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಗೊಳಗಾದ ಮುಹಮ್ಮದ್ ಹಾಶಿರ್ ದಾಖಲಾಗಿರುವ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನಿಯೋಗ ಭೇಟಿ ನೀಡಿ ಆರೋಗ್ಯ ವಿಚಾರಿಸಿತು.
ನಿಯೋಗದಲ್ಲಿ ಮಾಜಿ ಮೇಯರ್ ಕೆ.ಅಶ್ರಫ್, ಹಮೀದ್ ಕುದ್ರೋಳಿ, ಸಿ.ಎಂ. ಮುಸ್ತಫಾ, ಅಶ್ರಫ್ ಕಿನಾರ, ಹನೀಫ್ ಅಡ್ವಕೇಟ್, ಸೇವಾದಳದ ಅಧ್ಯಕ್ಷ ಅಶ್ರಫ್, ಶಾಫಿ ಬಬ್ಬುಕಟ್ಟೆ, ಮೊಯ್ದಿನ್ ಮೋನು, ಝಾಕೀರ್ ಮತ್ತಿತರರು ಉಪಸ್ಥಿತರಿದ್ದರು.