ಮೋದಿಯಿಂದ ಭಾರತಕ್ಕೆ ವಿಶ್ವಗುರು ಪಟ್ಟ
Update: 2017-05-27 18:06 IST
ಕಾಪು, ಮೇ 27: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಭಾರತಕ್ಕೆ ವಿಶ್ವಗುರು ಪಟ್ಟ ದೊರಕುವಂತೆ ಮಾಡಿದೆ ಎಂದು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಕ್ಷೇತ್ರ ಬಿಜೆಪಿ ವತಿಯಿಂದ ಕಾಪು ಪೇಟೆಯಲ್ಲಿ ಆಯೋಜಿಸಲಾಗಿದ್ದ ಮೋದಿ ಸರ್ಕಾರ - ಮೂರನೇ ವರ್ಷಾಚರಣೆ ಇದರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನರೇಂದ್ರ ಮೋದಿಯವರು ದೇಶದ ನಾಯಕನ ಪಟ್ಟದ ಜೊತೆಗೆ ಅಂತಾರಾಷ್ಟ್ಟ್ರೀಯ ಮಟ್ಟದಲ್ಲೂ ದೇಶದ ಖ್ಯಾತಿಯನ್ನು ವಿಸ್ತರಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತೀಯರಿಗೆ ತಲೆ ಎತ್ತಿ ನಿಲ್ಲುವ ವಾತಾವರಣವನ್ನು ನಿರ್ಮಿಸಿದ್ದಾರೆ. ದೇಶದ ಪ್ರತಿಯೋರ್ವ ಪ್ರಜೆಯೂ ಹೆಜ್ಜೆಯನ್ನು ಸೇರಿಸಿ ಅವರನ್ನು ಮುನ್ನಡೆಸಬೇಕಿದೆ ಎಂದು ಹೇಳಿದರು.