×
Ad

ಮೋಂಟುಗೋಳಿ ಅಂಗನವಾಡಿ ಕೇಂದ್ರದ ‘ಸೌರಶಕ್ತಿ ಸ್ಮಾರ್ಟ್ ಕ್ಲಾಸ್’ ಸೌಲಭ್ಯಕ್ಕೆ ಯು.ಟಿ.ಖಾದರ್ ಚಾಲನೆ

Update: 2017-05-27 18:11 IST

ಕೊಣಾಜೆ, ಮೇ 27: ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಬಹುಪಯೋಗಿ ಯೋಜನೆಗಳನ್ನು ನಿಸ್ವಾರ್ಥವಾಗಿ ಸಮಾಜಕ್ಕೆ ಅರ್ಪಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಹೇಳಿದರು.

ಅವರು ಸೆಲ್ಕೋ ಸೋಲಾರ್ ಲೈಟ್ ಪೈವೆಟ್ ಲಿಮಿಟೆಡ್ ಕಂಪೆನಿ ಮತ್ತು ಕೈರಂಗಳ ವ್ಯವಸಾಯ ಸೇವಾ ಸಹಾಕಾರಿ ಬ್ಯಾಂಕ್‌ನ ಸಹಕಾರದೊಂದಿಗೆ ಮೋಂಟುಗೋಳಿಯ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಸೋಲಾರ್ ಐಪ್ಯಾಡ್ ಮತ್ತು ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಶನಿವಾದಂದು ಉದ್ಘಾಟಿಸಿ ಮಾತನಾಡಿದರು.

   ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ಶ್ರೀಮಂತರ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮದ ನರ್ಸರಿ, ಯುಕೆಜಿ ಸೇರುತ್ತಾರೆ. ಆದರೆ ಬಡವರ ಮಕ್ಕಳು ಅಂಗನವಾಡಿಯಲ್ಲೇ ವಿದ್ಯಾಭ್ಯಾಸ ಮಾಡುತ್ತಾರೆ. ಆದ್ದರಿಂದ ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂತಹ ಆಧುನಿಕ ಸೌಲಭ್ಯದೊಂದಿಗೆ ಬಡವರ ಮಕ್ಕಳು ಕೂಡಾ ಐಪ್ಯಾಡ್ ಮತ್ತು ಇತರ ಆಧುನಿಕ ವ್ಯವಸ್ಥೆಯೊಂದಿಗೆ ಮುನ್ನಡೆಯಲು ಅವಕಾಶಗಳು ಸಿಗುತ್ತದೆ ಎಂದು ಹೇಳಿದರು.

ಸೆಲ್ಕೋ ಕಂಪೆನಿಯ ವ್ಯವಸ್ಥಾಪಕ ಲೋಕೇಶ್ ಎಂ.ಎಚ್ ಅವರು ಮಾತನಾಡಿ, ಈ ಯೋಜನೆಯಲ್ಲಿ ಐಪ್ಯಾಡ್, ಫ್ಯಾನ್, ಲೈಟ್‌ಗಳು ಸೋಲಾರ್ ಮೂಲಕವೇ ನಡೆಯುತ್ತವೆ. ವಿದ್ಯುತ್‌ನ ಸಮಸ್ಯೆ ಇರುವುದಿಲ್ಲ. ಅಲ್ಲದೆ ಐಪ್ಯಾಡ್ ಮೂಲಕ ಪುಟಾಣಿ ಮಕ್ಕಳಿಗೆ ವಿದ್ಯಾರ್ಜನೆಗೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ. ಈ ಯೋಜನೆಗೆ ಸುಮಾರು 56 ಸಾವಿರ ರೂ ವೆಚ್ಚ ತಗುಲಿದ್ದು ಇದರಲ್ಲಿ 30 ಸಾವಿರ ರೂ ಸೆಲ್ಕೊ ಕಂಪೆನಿ ಭರಿಸಿದ್ದು ಉಳಿದ ಹಣವನ್ನು ಕೈರಂಗಳ ಸೇವಾ ಸಹಕಾರಿ ಬ್ಯಾಂಕ್ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿ, ಜಿ.ಪಂ.ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂ. ಸದಸ್ಯ ಹೈದರ್ ಕೈರಂಗಳ, ಕೈರಂಗಳ ವ್ಯವಸಾಯ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಉಗ್ಗಪ್ಪ ಮಾಣಾಯಿ, ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮಹೇಶ್ ಚೌಟ, ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಪದ್ಮನಾಭ ನರಿಂಗಾನ, ಬಾಳೆಪುಣಿ ಗ್ರಾಮ ಪಂ. ಅಧ್ಯಕ್ಷ ಲೀಲಾವತಿ, ನರಿಂಗಾನ ಗ್ರಾಮ ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ನಾಸೀರ್ ನಡುಪದವು, ಗೋಪಾಲ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News