ಮಹಿಳೆ ನಾಪತ್ತೆ

Update: 2017-05-27 14:47 GMT

ಮಂಗಳೂರು, ಮೇ 27: ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಿಲ್ಪಾಡಿ ಗ್ರಾಮದ ಕುಬೆವೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬೇಬಿ ಮತ್ತು ನಾಗಪ್ಪ ದಂಪತಿಯ ಪುತ್ರಿ ಪವಿತ್ರಾ (20) ನಾಪತ್ತೆಯಾಗಿರುವ ಮಹಿಳೆ.

ಮೇ 13ರಂದು ಬೆಳಗ್ಗೆ 10 ಗಂಟೆಗೆ ಮಗುವಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡಲು ಹೋಗುವುದಾಗಿ ಹೇಳಿ ತನ್ನ ಮಗುವನ್ನು ಹತ್ತಿರ ಮನೆಯ ಮಹಿಳೆಯ ಬಳಿ ಕೊಟ್ಟು ಹೋದವರು ವಾಪಾಸು ಬಾರದೆ, ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ ಎಂದು ಬೇಬಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈಕೆ ರಂಜಿತ್ ಎಂಬವರೊಂದಿಗೆ ಹೋಗಿರಬೇಕೆಂದು ಶಂಕಿಸಲಾಗಿದೆ. 4 ಅಡಿ ಎತ್ತರ, ಸಪೂರ ಶರೀರ, ಮನೆಯಿಂದ ತೆರಳುವಾಗ ಚೂಡಿದಾರ ಧರಿಸಿರುತ್ತಾರೆ. ಪವಿತ್ರಾ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ದೂರವಾಣಿ 0824-2290533 ಅಥವಾ ಮೊಬೈಲ್ 9480805359 ಸಂಖ್ಯೆಯನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News