21 ಬಾರಿ ಎವರೆಸ್ಟ್ ಆರೋಹಣ: ನೇಪಾಳಿ ಶೆರ್ಪಾ ಹೊಸ ಇತಿಹಾಸ

Update: 2017-05-28 03:57 GMT

ವಾಶಿಂಗ್ಟನ್,ಮೇ 27: ಎವರೆಸ್ಟ್ ಶಿಖರವನ್ನು ದಾಖಲೆಯ 21 ಬಾರಿ ಹತ್ತುವ ಮೂಲಕ 47 ವರ್ಷ ವಯಸ್ಸಿನ ನೇಪಾಳಿ ಶೆರ್ಪಾ ಒಬ್ಬರು, ಹೊಸ ಇತಿಹಾಸವನ್ನು ಬರೆದಿದ್ದಾರೆ. ಎವರೆಸ್ಟ್ ಶಿಖರವನ್ನು 21 ಬಾರಿ ಏರಿದ ಮೂರನೆಯ ಪರ್ವತಾರೋಹಿ ಎಂಬ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. ಕಾಮಿ ರೀತಾ ಶೆರ್ಪಾ ಅವರು 8,848 ಮೀಟರ್ ಅಡಿ ಎತ್ತರದ ವಿಶ್ವದ ಅತಿ ಎತ್ತರದ ಶಿಖರವಾಗಿರುವ ವೌಂಟ್ ಎವರೆಸ್ಟ್ ನ ತುದಿಯನ್ನು ಇಂದು ಸ್ಥಳೀಯ ಕಾಲಮಾನ 8:15ರ ವೇಳೆಗೆ ತಲುಪಿದ್ದಾರೆ.

 ‘ಅಲ್ಪೈನ್ ಆಸ್ಕೆಂಟ್ಸ್’ ಎವರೆಸ್ಟ್ ಆರೋಹಣದ ಭಾಗವಾಗಿ ಕಾಮಿ ರೀತಾ ಅವರು ಎವರೆಸ್ಟ್ ಶಿಖರವನ್ನೇರಿದ್ದಾರೆಂದು, ಶಾಂಗ್ರಿ ಲಾ ನೇಪಾಳ ಚಾರಣ ಸಂಸ್ಥೆಯ ಆಡಳಿತ ನಿರ್ದೇಶಕ ಜಿಬಾನ್ ಗಿಮ್ರೆ ತಿಳಿಸಿದ್ದಾರೆ.

 ಈ ಮೊದಲು ನೇಪಾಳದ ಅಪಾ ಶೆರ್ಪಾ ಹಾಗೂ ಫುರ್ಬಾ ತಾಶಿ ಶೆರ್ಪಾ ಅವರು ಎವರೆಸ್ಟ್‌ನ್ನು 21 ಸಲ ಏರಿದ್ದರು.

 1953ರಲ್ಲಿ ಎಡ್ಮಂಡ್ ಹಿಲರಿ ಹಾಗೂ ತೇನ್‌ಸಿಂಗ್ ನೊರ್ಗೆ ಅವರು ವಿಶ್ವದಲ್ಲೇ ಮೊದಲ ಬಾರಿಗೆ ಎವರೆಸ್ಟ್ ಶಿಖರವನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News