ಮಲ್ಪೆ: ದಲಿತ ಕಾಲನಿ ಬಳಿ ಹೈಟೆನ್ಶ್‌ನ್ ತಂತಿ ತೆರವಿಗೆ ಆಗ್ರಹ
ಮಲ್ಪೆ, ಮೇ 27: ನಗರಸಭಾ ವ್ಯಾಪ್ತಿಯ ವಡಭಾಂಡೇಶ್ವರ 2ನೇ ವಾರ್ಡಿನ ಪರಿಶಿಷ್ಟ ಜಾತಿಯ ಕಾಲೋನಿ ಬಳಿ ಹಾಕಲಾದ ಹೈಟೆನ್ಶ್‌ನ್ ವಿದ್ಯುತ್ ತಂತಿ ಕಂಬಗಳನ್ನು ತಕ್ಷಣ ತೆರವುಗೊಳಿಸುವಂತೆ ದಲಿತ ಮುಖಂಡರು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಆಗ್ರಹಿಸಿದರು.
600ಕ್ಕೂ ಅಧಿಕ ಮಂದಿ ವಾಸ್ತವ್ಯವಿರುವ ಮಲ್ಪೆವಡಬಾಂಡೇಶ್ವರದ ನೆರ್ಗಿ ಪ್ರದೇಶದ ದಲಿತ ಕಾಲನಿಯ ಬಳಿ ಮಲ್ಪೆಯಲ್ಲಿ ಸ್ಥಾಪಿಸಿರುವ 33/11 ಕೆ.ವಿ ಸ್ಟೇಶನಿಗೆ ನಿಟ್ಟೂರಿನಿಂದ ಹೈಟೆನ್ಶ್‌ನ್ ತಂತಿ ಹಾದು ಹೋಗಲು ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ವಿದ್ಯುತ್ ಕಂಬಗಳನ್ನು ಹಾಕಿ ಇಲ್ಲಿನ ನಿವಾಸಿ ಗಳಿಗೆ ಜೀವ ಭಯವನ್ನುಂಟು ಮಾಡಿರುವ ಮೆಸ್ಕಾಂ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್‌ಗೆ ದೂರು ನೀಡಿರುವ ಹಿನ್ನಲೆಯಲ್ಲಿ ಸ್ಥಳ ಪರಿಸೀಲನೆಗೆ ಇಂದು ಅಗಮಿಸಿದ ಮೆಸ್ಕಾಂನ ಅಧಿಕಾರಿಗಳನ್ನು ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡರು.
ಇಲ್ಲಿಂದ ಹಾದು ಹೋಗುವ ಹೈಟೆನ್ಶ್‌ನ್ ತಂತಿಯನ್ನು ಬೇರೆಕಡೆಗೆ ಸ್ಥಳಾಂತರಿಸದಿದ್ದಲ್ಲಿ ಪ್ರತಿಟನೆ ನಡೆಸುವುದಾಗಿ ದಲಿತ ಮುಖಂಡು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿಂದ ಹಾದು ಹೋಗುವ ಹೈಟೆನ್ಶ್‌ನ್ ತಂತಿಯನ್ನು ಬೇರೆಕಡೆಗೆ ಸ್ಥಳಾಂತರಿಸದಿದ್ದಲ್ಲಿ ಪ್ರತಿಟನೆ ನಡೆಸುವುದಾಗಿ ದಲಿತ ಮುಖಂಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಜಯನ್ ಮಲ್ಪೆ, ನಗರಸಭೆ ಸದಸ್ಯ ಗಣೇಶ್ ನೆರ್ಗಿ, ಸುರೇಶ್ ನೆರ್ಗಿ, ಹರೀಶ ಕೋಟ್ಯಾನ್, ಪ್ರಸಾದ್ ಮಲ್ಪೆ, ಭಗವಾನ್‌ದಾಸ್, ರತನ್ ಮಲ್ಪೆ ಮೋಹನ್‌ದಾಸ್ ಮುಂತಾದವರು ಉಪಸ್ಥಿತರಿದ್ದರು.