×
Ad

ಅಂತಾರಾಷ್ಟ್ರೀಯ ಕರಾಟೆ: ಶೋರಿನ್ ರಿಯೋ ಚಾಂಪಿಯನ್‌

Update: 2017-05-27 21:53 IST

ಮಂಗಳೂರು, ಮೇ 27: ಮಲೆಷ್ಯಾದ ಮಂಜೂನ್‌ಗ್ ಪೆರಾಕ್‌ನ ಇಂದೂರ್ ಸ್ಟೇಡಿಯಂನಲ್ಲಿ ಮೇ 5ರಿಂದ 7ರವರೆಗೆ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಮೂಡಬಿದ್ರೆಯ ಶೋರಿನ್ ರಿಯೊ ಕರಾಟೆ ತಂಡವು 6 ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳೊಂದಿಗೆ ಒಟ್ಟು 12 ಪದಕಗಳನ್ನು ಪಡೆಯುವ ಮೂಲಕ ಉಥ್ತಮ ಪ್ರದರ್ಶನವನ್ನು ನೀಡಿ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದುಕೊಂಡಿದೆ.

ಹುಡುಗಿಯರ ವಿಭಾಗದಲ್ಲಿ ಆಯಿಶಾ ಫಾತಿಮಾ 1 ಚಿನ್ನ, 1 ಬೆಳ್ಳಿ ಪದಕ ಹಾಗೂ ಸಿಮ್ರ ಹನೀಫ್ 1 ಕಂಚಿನ ಪದಕವನ್ನು ಪಡೆದಿದ್ದಾರೆ.

ಹುಡುಗರ ವಿಭಾಗದಲ್ಲಿ ಆಸಿಫ್ ಅಹ್ಮದ್ 1 ಚಿನ್ನ, ನಿರಾನ್ 1 ಚಿನ್ನ, ಮುಹಮ್ಮದ್ ಅಮನ್ 1 ಚಿನ್ನ, ಸರ್ಫರಾಝ್ 1 ಚಿನ್ನ, ಆಮಿಷ್ ಅಹ್ಮದ್ 1 ಚಿನ್ನ, ಮುಹಮ್ಮದ್ ಶಯಾನ್ 1 ಬೆಳ್ಳಿ, 1 ಕಂಚು, ಪ್ರಖ್ಯಾತ್ ಪೂಜಾರಿ 1 ಬೆಳ್ಳಿ, ಶಹಾನ್ ಎ.ಕೆ. 1 ಕಂಚಿಕ ಪದಕವನ್ನು ಪಡೆದರು.

ಇವರೊಂದಿಗೆ ಶೋರಿನ್ ರಿಯೊ ಕರಾಟೆಯ ಮುಖ್ಯ ಶಿಕ್ಷಕ ನದೀಂ ಮತ್ತು ಸರ್ಫರಾಝ್ ಅವರು ಮಲೇಷ್ಯಾಕ್ಕೆ ತೆರಳಿ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News