×
Ad

ವರ್ಗಾವಣೆಗೊಂಡಿರುವ ಮಂಗಳೂರು ಕಮಿಷನರ್ ರಿಗೆ ಜನಪರ ಸಂಘದಿಂದ ಅಭಿನಂದನೆ

Update: 2017-05-27 22:48 IST

ಮಂಗಳೂರು, ಮೇ 27: ಮಂಗಳೂರಿನಿಂದ ವರ್ಗಾವಣೆಗೊಂಡಿರುವ ದಕ್ಷ ಪೊಲೀಸ್ ಕಮಿಷನರ್ ಚಂದ್ರ ಶೇಖರ್ ಅವರಿಗೆ ನಗರದ ಜನಪರ ಸಂಘಟನೆಗಳ, ನಾಗರಿಕರ ಪರವಾಗಿ ವಿದಾಯ ಕೋರಲಾಯಿತು.

ಒಂದೂವರೆ ವರ್ಷಗಳ ಸೇವಾ ಅವಧಿಯಲ್ಲಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಪ್ರಾಮಾಣಿಕ ಪ್ರಯತ್ನಕ್ಕಾಗಿ ಅವರನ್ನು ಅಭಿನಂದಿಸಲಾಯಿತು.

ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹಿರಿಯ ದಲಿತ ನಾಯಕ ದೇವದಾಸ್. ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ. ಶೆಟ್ಟಿ, ಡಿಎಸ್‌ಎಸ್ ಮುಖಂಡ ವಿಶು ಕುಮಾರ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು, ಬಾವಾ ಪದರಂಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News