ಉಡುಪಿ: ಜೂ.1ಕ್ಕೆ ವಲಯವಾರು ಶಿಕ್ಷಕರ ಕೌನ್ಸೆಲಿಂಗ್
Update: 2017-05-27 23:48 IST
ಉಡುಪಿ, ಮೇ 27: ಜಿಲ್ಲೆಯ ಬೈಂದೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಉಡುಪಿ ಶೈಕ್ಷಣಿಕ ವಲಯಗಳಲ್ಲಿ ತಲಾ 2ರಂತೆ ಪ್ರೌಢಶಾಲಾ ಗ್ರೇಡ್-2 ಶ್ರೇಣಿಯ ಮತ್ತು ತಲಾ 2ರಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಶ್ರೇಣಿಯ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಪ್ರತೀ ವಲಯವಾರು ಶಿಕ್ಷಕರ ಕೌನ್ಸೆಲಿಂಗ್‌ಅನ್ನು ಜೂನ್ 1ರಂದು ರಜತಾದ್ರಿ ಮಣಿಪಾಲ ಉಪ ನಿರ್ದೇಶಕರ ಕಚೇರಿಯಲ್ಲಿ ಪೂರ್ವಾಹ್ನ 11ಕ್ಕೆೆ ನಡೆಸಲಾಗುವುದು. ಬಿ.ಎಡ್, ಡಿ.ಇಡಿ ತರಬೇತಿ ಪಡೆದ ಶಿಕ್ಷಕರು ಮೇ 30ರಂದು ಸಂಜೆ 5 ರೊಳಗೆ ತಮ್ಮ ವಿವರ ಹಾಗೂ ದಾಖಲೆಗಳೊಂದಿಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ.