ಸಿ.ಬಿ.ಎಸ್.ಇ: ಲೂರ್ಡ್ಸ್ ಸೆಂಟ್ರಲ್ ಶಾಲೆಗೆ 100 ಶೇ. ಫಲಿತಾಂಶ
Update: 2017-05-28 12:25 IST
ಮಂಗಳೂರು, ಮೇ 28: ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆದ ಸಿ.ಬಿ.ಎಸ್.ಇ. 12ನೆ ತರಗತಿ0ು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಲೂರ್ಡ್ಸ್ ಸೆಂಟ್ರಲ್ ಶಾಲೆ 100 ಶೇ. ಫಲಿತಾಂಶ ಗಳಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 58 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, 19 ವಿದ್ಯಾರ್ಥಿಗಳು 90 ಶೇ.ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳ ಪೈಕಿ ಸೌಮ್ಯಾ ಎಸ್. ರಾವ್ ವಾಣಿಜ್ಯ ವಿಭಾಗದಲ್ಲಿ 95 ಶೇ. ರೋಶನಿ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ (ಪಿ.ಸಿ.ಎಂ.ಬಿ) 94 ಶೇ., ವರುಣ್ ಕುಮಾರ್ (ಪಿ.ಸಿ.ಎಂ.ಸಿ) ವಿಜ್ಞಾನ ವಿಭಾಗದಲ್ಲಿ 97.4 ಶೇ. ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.