ಗುಜರಾತ್ ನಲ್ಲಿ 1 ಕೋಟಿ ಮೊತ್ತದ ಅಮಾನ್ಯ ನೋಟುಗಳ ವಶ: ನಾಲ್ವರ ಬಂಧನ

Update: 2017-05-28 13:00 GMT

ಗುಜರಾತ್, ಮೇ 28: ಅಮಾನ್ಯಗೊಂಡ 500 ಹಾಗೂ 1000 ಮುಖಬೆಲೆಯ 1 ಕೋಟಿ ಮೊತ್ತದ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸೂರತ್ ನಿಂದ ಆಗಮಿಸುತ್ತಿದ್ದ ಎಸ್ ಯುವಿ ಕಾರನ್ನು ತಪಾಸಣೆಗೊಳಪಡಿಸಿದಾಗ ಈ ನೋಟುಗಳು ಪತ್ತೆಯಾಗಿದೆ. 1,01,98,000 ಮೊತ್ತದ 11,322 ನೋಟುಗಳು ಬ್ಯಾಗ್ ವೊಂದರಲ್ಲಿ  ಕಾರಿನಲ್ಲಿ ಅಡಗಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿಭಾರುಚ್ ಸಿ ಡವಿಜನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News