ಗ್ರಾಪಂ ಸದಸ್ಯನಿಂದ ಬಡ ಕುಟುಂಬಕ್ಕೆ ಶೌಚಾಲಯ

Update: 2017-05-28 13:43 GMT

ಕಾಪು, ಮೇ 28: ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡ ಬೆಟ್ಟು ಗ್ರಾಮದ ಸರಕಾರಿ ಗುಡ್ಡೆಯ ಸುಂದರಿ ಸೇರಿಗಾರ್ತಿ ಬಡ ಕುಟುಂಬಕ್ಕೆ ಆ ವಾರ್ಡ್‌ನ ಗ್ರಾಪಂ ಸದಸ್ಯ ಅಶೋಕ್ ರಾವ್ ತನ್ನ ಸ್ವಂತ ಖರ್ಚಿನಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.

ತಾನು ಗೆದ್ದರೆ ಶೌಚಾಲಯ ಸೌಲಭ್ಯವಿಲ್ಲದ ಈ ಕುಟುಂಬಕ್ಕೆ ಶೌಚಾಲಯ ನೀಡುವುದಾಗಿ ಭರವಸೆ ನೀಡಿದ್ದ ಅಶೋಕ್ ರಾವ್ ಅದರಂತೆ ನಡೆದುಕೊಂಡಿ ದ್ದಾರೆ.

ಈ ಕುಟುಂಬಕ್ಕೆ ಸರಕಾರಿ ಶೌಚಾಲಯ ನೀಡಲು ಜಾಗದ ದಾಖಲೆಯ ಇಲ್ಲದ ಕಾರಣ ತಾಂತ್ರಿಕ ಅಡಚಣೆ ಎದುರಾಯಿತು. ಈ ಕಾರಣಕ್ಕೆ ಅಶೋಕ್ ರಾವ್ ಸ್ವತಃ 25 ಸಾವಿರ ಹಣ ಹಾಕಿ ಶೌಚಾಲಯ, ಸ್ನಾನದ ಮನೆ ನಿರ್ಮಿಸಿ ಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News