ಯುಎಇ: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಭಾರತೀಯ ಶಾಲೆಗಳ ಉತ್ತಮ ಸಾಧನೆ

Update: 2017-05-28 15:24 GMT

ದುಬೈ,ಮೇ 28: ಯುಎಇನಲ್ಲಿರುವ ಭಾರತೀಯ ಶಾಲೆಗಳ 12ನೇ ತರಗತಿ ಸಿಬಿಎಸ್‌ಇ ಫಲಿತಾಂಶ ರವಿವಾರ ಬೆಳಗ್ಗೆ ಪ್ರಕಟವಾಗಿದ್ದು, ಬಹುತೇಕ ಶಾಲೆಗಳಿಗೆ ಉತ್ತಮ ಫಲಿತಾಂಶ ಲಭ್ಯವಾಗಿದೆ.

 ವಿಜ್ಞಾನ ವಿಭಾಗದಲ್ಲಿ ದುಬೈನ ಇಂಡಿಯನ್ ಹೈಸ್ಕೂಲ್‌ನ ವಿದ್ಯಾರ್ಥಿನಿ ಮೇಘನಾ ಸವಿತ್‌ಗೆ ಶೇ.98.4 ಅಂಕಗಳು ಲಭ್ಯವಾಗಿದ್ದು, ಇದು ಯುಎಇನ ಶಾಲೆಗಳು ಘೋಷಿಸಿದ ಫಲಿತಾಂಶಗಳ ಪೈಕಿ ಗರಿಷ್ಠ ಅಂಕವೆನ್ನಲಾಗಿದೆ.

 ವಾಣಿಜ್ಯ ವಿಭಾಗದಲ್ಲಿ ಜೆಮ್ಸ್ ವಿದ್ಯಾರ್ಥಿ ಎಸ್.ಆಕಾಶ್ ಶಾ ಶೇ.98.2 ಅಂಕಗಳಿಸಿದ್ದು ಇದು ಯುಎಇಲ್ಲೇ ಗರಿಷ್ಠ ಸಾಧನೆಯಾಗಿದೆ.
  ಈ ವರ್ಷದ 10 ಹಾಗೂ 12ನೇ ತರಗತಿಗಳಿಗಾಗಿ ನಡೆದ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗೆ ಯುಎಇನಲ್ಲಿ ಸುಮಾರು 2 ಸಾವಿರ ಭಾರತೀಯ ಶಾಲಾ ವಿದ್ಯಾರ್ಥಿಗಳು ಹಾಜರಾಗಿದ್ದರು. 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ದುಬೈ ಇಂಡಿಯನ್ ಹೈಸ್ಕೂಲ್‌ನ ಎಲ್ಲಾ 522 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.100 ಫಲಿತಾಂಶವನ್ನು ದಾಖಲಿಸಿದೆ. ಈ ಪೈಕಿ ಶೇ. 99.8 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಲ್‌ವರ್ಕಾದ ಆವರ್ ಓನ್ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿ ಆಕಾಶ್‌ಕುನ್ನತ್ತ್ ಮಾಣಿ ವಿಜ್ಞಾನ ವಿಭಾಗದಲ್ಲಿ ಶೇ. 98 ಅಂಕಗಳಿಸಿದ್ದಾರೆ. ಮಾನವಿಕ ವಿಭಾಗದಲ್ಲಿ ಆವರ್ ಓನ್ ಇಂಗ್ಲೀಷ್ ಹೈಸ್ಕೂಲ್ (ಬಾಲಕಿಯರು) ವಿದ್ಯಾರ್ಥಿನಿ ಹೈಫಾ ಸುನಿಲ್ ಅಝೀಝ್ ಶೇ.96.6 ಅಂಕಗಳಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News