ಭಾರತ, ಗಾಂಧಿ ಪಠ್ಯಗಳ ಅಳವಡಿಕೆಗೆ ಆಕ್ಸ್‌ಫರ್ಡ್ ವಿವಿ ನಿರ್ಧಾರ

Update: 2017-05-28 15:41 GMT

ಲಂಡನ್, ಮೇ 28: ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯು ಇತಿಹಾಸದ ವಿದ್ಯಾರ್ಥಿಗಳಿಗಾಗಿ ಪಠ್ಯದಲ್ಲಿ ಭಾರತ, ಏಶ್ಯ ಹಾಗೂ ಮಧ್ಯಪ್ರಾಚ್ಯದ ಕುರಿತ ವಿಷಯಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಭಾರತೀಯ ಸ್ವಾತಂತ್ರ ಚಳವಳಿ ಹಾಗೂ 1960 ನಾಗರಿಕ ಹಕ್ಕುಗಳ ಚಳವಳಿ ನೂತನ ಪಠ್ಯದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿಂದು ಆಕ್ಸ್‌ಫರ್ಡ್ ವಿವಿಯ ಅಧಿಕೃತ ಮೂಲಗಳು ತಿಳಿಸಿವೆ. ಮಹಾತ್ಮಾ ಗಾಂಧಿ ಹಾಗೂ ಮಾರ್ಟಿನ್ ಲೂಥರ್‌ಕಿಂಗ್ ಅವರ ಬದುಕು, ಸಾಧನೆಗಳನ್ನೂ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.

    ಇತಿಹಾಸ ಪಠ್ಯಗಳಲ್ಲಿ ಬಿಳಿಯ ಜನಾಂಗೀಯರ ಕುರಿತಾದ ವಿಷಯಕ್ಕೆ ಮಾತ್ರವೇ ಪ್ರಾಧಾನ್ಯತೆ ನೀಡಿರುವುದನ್ನು ವಿರೋಧಿಸಿ ಬ್ರಿಟನ್‌ನಾದ್ಯಂತ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಆಕ್ಸ್‌ಫರ್ಡ್ ವಿವಿ ಈ ಕ್ರಮಕ್ಕೆ ಮುಂದಾಗಿದೆ. ವಿವಿ ಪಠ್ಯಕ್ರಮಗಳು ವಸಾಹತುಶಾಹಿ ಮನೋಭಾವದಿಂದ ಮುಕ್ತಗೊಳ್ಳಬೇಕೆಂದೂ ಅಭಿಯಾನವು ಆಗ್ರಹಿಸಿತ್ತು.

   ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಇತಿಹಾಸ ಬೋಧನೆಯಲ್ಲಿ ವೈವಿಧ್ಯತೆಯನ್ನು ತರುವ ಉದ್ದೇಶದಿಂದ ಪಠ್ಯಕ್ರಮದಲ್ಲಿ ಈ ರೀತಿಯ ಮಾರ್ಪಾಡುಗಳನ್ನು ಮಾಡಲಾಗಿದೆಯೆಂದು ಆಕ್ಸ್‌ಫರ್ಡ್ ವಿವಿಯ ಬೋಧನ ವಿಭಾಗದ ವರಿಷ್ಠ ಮಾರ್ಟಿನ್ ಕಾನ್‌ವೇ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News