ಭಾರತ-ಪಾಕ್ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ: ವಿಶ್ವಸಂಸ್ಥೆ

Update: 2017-05-28 16:09 GMT

ವಿಶ್ವಸಂಸ್ಥೆ, ಮೇ 28: ಭಾರತ ಹಾಗೂ ಪಾಕಿಸ್ತಾನ ಆಸಕ್ತಿಯನ್ನು ತೋರಿದಲ್ಲಿ ಉಭಯದೇಶಗಳ ನಡುವಿನ ವಿವಾದಗಳ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧನಿರುವುದಾಗಿ ವಿಶ್ವಸಂಸ್ಥೆ ಶನಿವಾರ ಹೇಳಿದೆ.

  ಎರಡೂ ದೇಶಗಳ ನಡುವೆ ಇರುವ ಯಾವುದೇ ವಿವಾದಗಳ ಹಾಗೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇರುವ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ವಿಶ್ವಸಂಸ್ಥೆ ಸಿದ್ಧವಿರುವುದು’’ ಎಂದು ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ತಿಳಿಸಿದ್ದಾರೆ.
ಆದರೆ ಈ ಕುರಿತಾಗಿ ಎರಡೂ ದೇಶಗಳು ಆಸಕ್ತಿ ವಹಿಸಿದರೆ ಮಾತ್ರ ವಿಶ್ವಸಂಸ್ಥೆಯು ಸಂಧಾನಕಾರನಾಗಿ ಭಾಗವಹಿಸಲು ಸಿದ್ಧವಿರುವುದಾಗಿ ಎಂದು ಪ್ರಧಾನ ಕಾರ್ಯದರ್ಶಿಯವರ ಸಹವಕ್ತಾರ ಫರ್ಹಾನ್ ಹಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News