ಯಕ್ಷಗಾನವನ್ನು ಸಂಕುಚಿತ ಭಾವನೆಯಿಂದ ನೋಡದಿರಿ: ಡಾ.ಹಂಸರಾಜ್ ಆಳ್ವ

Update: 2017-05-28 18:20 GMT

ಮಂಗಳೂರು, ಮೇ 28: ಯಕ್ಷಗಾನವು ಅತ್ಯಂತ ಪುರಾತನ ಕಲೆಯಾಗಿದೆ. ಅದನ್ನು ಸಂಕುಚಿತ ಭಾವನೆ ಯಿಂದ ನೋಡದೆ ಜಾತಿ, ಧರ್ಮದ ಚೌಕಟ್ಟನ್ನು ಮೀರಿ ಗೌರವಿಸಬೇಕು. ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸುವುದು ಅಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದು ವಿನಯ ನರ್ಸಿಂಗ್ ಹೋಮ್‌ನ ಡಾ.ಹಂಸರಾಜ್ ಆಳ್ವ ಹೇಳಿದರು.

ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ರವಿವಾರ ನಡೆದ ಯಕ್ಷಧ್ರುವ ಪಟ್ಲ ೌಂಡೇಶನ್ ಟ್ರಸ್ಟ್‌ನ ಯಕ್ಷಧ್ರುವ ಪಟ್ಲ ಸಂಭ್ರಮ-2017ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಧರ್ಮ, ಸಂಸ್ಕೃತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷ ಗಾನ ಮಾಡುತ್ತಿದ್ದರೆ, ಯಕ್ಷಗಾನದ ಕಲಾವಿದರನ್ನು ಸಂತೋಷಗೊಳಿಸುವ ಕಾರ್ಯವನ್ನು ಯಕ್ಷಧ್ರುವ ಪಟ್ಲ ೌಂಡೇಶನ್ ಮಾಡುತ್ತಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಲಾವಿದರಿಗೆ ಪಟ್ಲ ೌಂಡೇಶನ್ ನೀಡುವ ಗೌರವ, ಪ್ರಶಸ್ತಿ ಸರಕಾರದ ಯಾವುದೇ ಪ್ರಶಸ್ತಿಗಳಿಗೆ ಕಡಿಮೆಯಿಲ್ಲ್ಲ ಎಂದು ಹೇಳಿದರು.


 ಈ ಸಂದರ್ಭ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ ಆಶೀರ್ವಚನ ನೀಡಿದರು.
ಇದೇ ಸಂದರ್ಭ ಬಲಿಪ ನಾರಾಯಣ ಭಾಗ ವತರ ಉಪಸ್ಥಿತಿಯಲ್ಲಿ ಅವರ 14 ಯಕ್ಷಗಾನ ಪ್ರಸಂಗಗಳ ಸಂಪುಟ ‘ಜಯಲಕ್ಷ್ಮಿ’ಯನ್ನು ಬಿಡು ಗಡೆಗೊಳಿಸಲಾಯಿತು. ಕೃತಿಯ ಸಂಪಾದಕಿ ಡಾ.ನಾಗವೇಣಿ ಮಂಚಿ ಕೃತಿಯ ಕುರಿತು ಮಾತ ನಾಡಿದರು.

ಸಂಸದ ನಳಿನ್‌ಕುಮಾರ್ ಕಟೀಲು, ಡಾ. ಸುರೇಶ್ ರಾವ್ ಕಟೀಲು, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಕ್ಷೇಮದ ಡೀನ್ ಡಾ. ಸತೀಶ್ ಭಂಡಾರಿ, ಸವಣೂರು ಕೆ. ಸೀತಾರಾಮ ರೈ, ಕೆ. ಜೈರಾಜ್ ಬಿ.ರೈ, ಗುಣಶೀಲ ಶೆಟ್ಟಿ, ರಮಾನಂದ ಶೆಟ್ಟಿ, ಹರೀಶ್ ಬಂಗೇರ, ವಸಂತ ಶೆಟ್ಟಿ ಬೆಳ್ಳಾರೆ, ಕಿಶನ್ ಹೆಗ್ಡೆ, ಲೀಲಾಕ್ಷ ಕರ್ಕೇರ, ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಪಟ್ಲಗುತ್ತು ಮಹಾಬಲ ಶೆಟ್ಟಿ, ಡಾ. ಎಂ.ಪ್ರಭಾಕರ ಜೋಶಿ, ಜಯರಾಮ ಶೆಟ್ಟಿ, ಚಿಕ್ಕಪ್ಪ ನಾಯ್ಕಿ ಪುತ್ತೂರು, ಭುಜಬಲಿ, ದಿನೇಶ್ ವೈದ್ಯ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ರವಿ ಶೆಟ್ಟಿ ಅಶೋಕನಗರ ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರು ಹಾಗೂ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News