ರಾಜಕೀಯ ಪ್ರೇರಿತ ಆರೋಪ, ಪ್ರತಿಭಟನೆಗೆ ಬಗ್ಗುವವಳು ನಾನಲ್ಲ -ಶಕುಂತಳಾ ಶೆಟ್ಟಿ

Update: 2017-05-28 18:23 GMT

ಉಪ್ಪಿನಂಗಡಿ, ಮೇ 28: ಗ್ರಾಮದ, ಊರಿನ ಅಭಿವೃದ್ಧಿ, ಪ್ರಗತಿಯ ವಿಚಾರದಲ್ಲಿ ನಾನು ರಾಜಕೀಯ ಮುಕ್ತವಾಗಿರುವವಳು ನಾನು ಹೀಗಿರುವಾಗ ಅಭಿವೃದ್ಧಿ ಮಾಡುವಾಗ ಯಾರೇ ರಾಜಕೀಯ ಮಾಡಿದರೆ ನಾನು ಸಹಿಸುವವಲಲ್ಲ, ರಾಜಕೀಯ ಪ್ರೇರಿತ ಆರೋಪ, ಪ್ರತಿಭಟನೆಗೆ ಬಗ್ಗುವವಳೂ ನಾನಲ್ಲ ಎಂದು ಶಾಸಕಿ, ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

ಅವರು "ಗಾಂಧಿ ಪಥ ಗ್ರಾಮ ಪಥ" "ನಮ್ಮ ಗ್ರಾಮ ನಮ್ಮ ರಸ್ತೆ" ಯೋಜನೆ ಅಡಿಯಲ್ಲಿ ಮಂಜೂರು ಆಗಿರುವ ಹಿರೇಬಂಡಾಡಿ ಗ್ರಾಮದ ದಾಸರಮೂಲೆ-ಅಡೇಕ್ಕಲ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿನ ಈ ರಸ್ತೆ ಒಂದೂವರೆ ಕಿ.ಲೋ. ಮೀಟರ್ ಉದ್ದ ಅಭಿವೃದ್ಧಿ ಹೊಂದಲಿದೆ ಎಂದರು.

ಇಂತಹ ಯೋಜನೆ ಮೂಲಕ ನಮ್ಮ ಗ್ರಾಮಕ್ಕೆ, ನಮ್ಮ ಮನೆ ಮುಂದೆ ರಸ್ತೆ ಅಭಿವೃದ್ಧಿ ಆಗುವುದು ಪುಣ್ಯ ಎಂದು ಅಂದುಕೊಂಡು ಕಾಮಗಾರಿಗೆ ಯಾವುದೇ ಚ್ಯುತಿ, ಅಡ್ಡಿ ಆಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದ ಅವರು ರಸ್ತೆ ಚರಂಡಿಯಿಂದ ಚರಂಡಿಗೆ 9 ಮೀಟರ್ ಇರುತ್ತದೆ, ಕಾಮಗಾರಿ ಆಗುವಾಗ ಒಂದಿಂಚು ಜಾಗ ಬಿಟ್ಟು ಕೊಡಬೇಕಾದಲ್ಲಿ ಅದಕ್ಕೆ ಅಡ್ಡಿಪಡಿಸದೆ ಊರ ಅಭಿವೃದ್ಧಿಯಲ್ಲಿ ತನ್ನ ಪಾತ್ರವನ್ನು ಗುರುತಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದರು.

13 ರಸ್ತೆಗೆ 19 ಕೋಟಿ, 77 ಲಕ್ಷ ಮಂಜೂರು:

"ನಮ್ಮ ಗ್ರಾಮ ನಮ್ಮ ರಸ್ತೆ" ಯೋಜನೆಯಲ್ಲಿ ತಾಲ್ಲೂಕಿಗೆ ಒಟ್ಟು 13 ರಸ್ತೆ ಮಂಜೂರು ಆಗಿದೆ. ಎಲ್ಲಾ 13 ಕಾಮಗಾರಿಗಳಿಗೆ 2 ದಿನಗಳಿಂದ ಗುದ್ದಲಿ ಪೂಜೆ ನಡೆದಿದ್ದು, 13ನೇ ಕೊನೆಯ ಕಾರ್ಯಕ್ರಮ ಇದಾಗಿರುತ್ತದೆ. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು 9 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.

13 ರಸ್ತೆಗಳು ಮತ್ತು ಮಂಜೂರು ಆಗಿರುವ ಅನುದಾನಗಳು (ಲಕ್ಷಗಳಲ್ಲಿ):
ಸುಳ್ಯಪದವು-ಪದ್ದಡ್ಕ-ಮೈಂದನಡ್ಕ ರಸ್ತೆಗೆ-221.50, ಬಲ್ನಾಡು-ಸಾಜ ರಸ್ತೆ-217, ಅರ್ಕ-ಹನಿಯೂರು ರಸ್ತೆ (ಕೊಡಿಪ್ಪಾಡಿ) -160.50, ಅಳಕೆಮಜಲು-ವಡ್ಯರ್ಪೆ ರಸ್ತೆ (ಇಡ್ಕಿದು)-72.50, ಪಾಟ್ರಕೋಡಿ-ಕೆದಿಲ ರಸ್ತೆ-126.50, ವಿನಾಯಕನಗರ-ಮಠಂತಬೆಟ್ಟು-ದೋರ್ಮೆ ರಸ್ತೆ (ಕೋಡಿಂಬಾಡಿ)-118, ಬೋಳಂತಿಲ ದರ್ಬೆ ರಸ್ತೆ (34-ನೆಕ್ಕಿಲಾಡಿ)-107.50, ತಲೆತ್ತಿಮಾರು-ಮುಂಡಮೂಲೆ ರಸ್ತೆ ) ಮಾಣಿಲ)-141, ನೀರ್ಕಜೆ-ಕಟ್ಟೆ ರಸ್ತೆ(ಕೇಪು)-141, ಗರಡಿಬೈಲು-ಅಡ್ಕ ರಸ್ತೆ(ಪುಣಚ)-160.50, ಪಾಪೆಮಜಲು-ಬಪ್ಪಪುಂಡೇಲು ರಸ್ತೆ(ಅರಿಯಡ್ಕ)-198, ಬನ್ನೂರು ಕಜೆ-ಕುಂಟ್ಯಾನ ರಸ್ತೆ (ಬನ್ನೂರು)-180, ದಾಸರಮೂಲೆ-ಅಡೆಕ್ಕಲ್ ರಸ್ತೆ (ಹಿರೇಬಂಡಾಡಿ)-133 ಲಕ್ಷ ರೂಪಾಯಿ ಸೇರಿದಂತೆ ಒಟ್ಟು ಕೋಟಿ, 77 ಲಕ್ಷದ 40 ಸಾವಿರ ರೂಪಾಯಿ ಮಂಜೂರು ಆಗಿದೆ ಎಂದು ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಹಿರೇಬಂಡಾಡಿ ಗ್ರಾಮ ಪಂ. ಅಧ್ಯಕ್ಷ ಶೌಕತ್ ಆಲಿ, ಸದಸ್ಯರುಗಳಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸದಸ್ಯರು ಗಳಾದ ಶ್ರೀಮತಿ ನಳಿನಿ, ಸದಾನಂದ ಶೆಟ್ಟಿ, ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ ದಾಸರಮೂಲೆ, ಮಾಜಿ ಸದಸ್ಯರುಗಳಾದ ಶಿವಚಂದ್ರ ನಿಡ್ಡೆಂಕಿ, ಶ್ರೀಮತಿ ಸವಿತಾ ಹರೀಶ್, ಶೇಷಪ್ಪ ನೆಕ್ಕಿಲು, ಬಿ.ಕೆ. ಅಬೂಬಕ್ಕರ್ ಕೊಳ್ಳೇಜಾಲ್,
ದೇವದಾಸ್ ರೈ,  ಪುತ್ತೂರು ನಗರ ಪ್ರಾಧಿಕಾರ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಹಿರೇಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್, ಕಾಂಗ್ರೆಸ್ ಹಿಂದುಳಿದ ವರ್ಗ ಅಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಪಿಡಬ್ಲ್ಯುಡಿ ಗುತ್ತಿಗೆದಾರ ರಾಧಾಕೃಷ್ಣ ನಾಯಕ್, ಹಿರಿಯ ಗುತ್ತಿಗೆದಾರರಾದ ಕೊಳ್ಳೇಜಾಲ್ ಯಾಕೂಬ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ, ಸ್ಥಳೀಯ ಪ್ರಮುಖರಾದ ಹಸೈನಾರ್ ಹಾಜಿ, ದೇವಪ್ಪ ಪಡ್ಪು, ವಿಜಯಬಾನು ಗೌಡ, ಸುಂದರ ಎಳಿಯ, ಝಕರಿಯಾ, ಅಗರಿ ಬಾಬು, ಲೋಕೇಶ್ ಬೆತ್ತೋಡಿ, ಸದಾನಂದ ದಾಸರಮೂಲೆ, ಲೋಕೇಶ್ ಮದಿಮೆತ್ತಮಾರು, ಅಬ್ದುಲ್ ರಹಿಮಾನ್ ಅಡೇಕ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಂಜಿನಿಯರ್ ಜನಾರ್ದನ ಸ್ವಾಗತಿಸಿ, ಸುಲೈಮಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News