×
Ad

ರಮಝಾನ್: ಉಮ್ರಾ ನಿರ್ವಹಿಸಿದ ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ ಪೌಲ್

Update: 2017-05-29 00:29 IST

ಜಿದ್ದಾ, ಮೇ 29: ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ, ಫ್ರೆಂಚ್ ನ ಪೌಲ್ ಪೋಗ್ಬಾ ಪವಿತ್ರ ರಮಝಾನ್ ತಿಂಗಳಲ್ಲಿ ಸೌದಿ ಅರೇಬಿಯಾಗೆ ಭೇಟಿ ನೀಡಿ ಉಮ್ರಾ ನಿರ್ವಹಿಸಿದ್ದಾರೆ. ಮ್ಯಾಂಚೆಸ್ಟರ್ ಟ್ರೋಫಿಯೊಂದನ್ನು ಜಯಿಸಿದ ಮೂರು ದಿನಗಳ ನಂತರ ಅಂದರೆ ಶನಿವಾರ ಅವರು ಸೌದಿ ತಲುಪಿದ್ದಾರೆ.

“ಈ ಆವೃತ್ತಿಗಾಗಿ ನಿಮಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಾರ್ಥನೆಯ ಹಾದಿಯಲ್ಲಿದ್ದು, ಶೀಘ್ರದಲ್ಲೇ ಮ್ಯಾಂಚೆಸ್ಟರ್ ಗೆ ಹಿಂದಿರುಗಲಿದ್ದೇನೆ” ಎಂದು ಲಗೇಜ್ ನೊಂದಿಗೆ ತನ್ನ ಮನೆಯ ಮುಂಭಾಗ ನಿಂತಿರುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಈ ಪ್ರಸಿದ್ಧ ಆಟಗಾರ ಇಹ್ರಾಮ್ ಧರಿಸಿ ಉಮ್ರಾ ನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ರಮಝಾನ್ ಕರೀಮ್” ಎಂದು ಪೌಲ್ ಪೋಗ್ಬಾ ಪೋಸ್ಟ್ ಮಾಡಿದ್ದಾರೆ.

ಮಕ್ಕಾಗೆ ಪೌಲ್ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಹಜ್ ನಿರ್ವಹಿಸುವ ಸಲುವಾಗಿ ಅವರು ಮಕ್ಕಾಗೆ ಭೇಟಿ ನೀಡಿದ್ದರು. ಉಮ್ರಾ ನಿರ್ವಹಿಸುತ್ತಿರುವ ಪ್ರಸಿದ್ಧ ಆಟಗಾರನನ್ನು ಕಂಡ ಅನೇಕರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

20ರ ಕೆಳಗಿನ ವಿಭಾಗದಲ್ಲಿ ಮ್ಯಾಂಚೆಸ್ಟರ್ ನ ನಾಯಕರಾಗಿದ್ದ ಪೌಲ್ 2013ರ ಫಿಫಾ ವಿಶ್ವಕಪ್ ನಲ್ಲಿ ದೇಶಕ್ಕೆ ಪ್ರಶಸ್ತಿ ಜಯಿಸಿಕೊಟ್ಟಿದ್ದರು. ಟೂರ್ನಮೆಂಟ್ ನಲ್ಲಿ ಪ್ರದರ್ಶನಕ್ಕಾಗಿ “ಅತ್ಯುತ್ತಮ ಆಟಗಾರ” ಪ್ರಶಸ್ತಿಯನ್ನೂ ಜಯಿಸಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News