ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ರಮಝಾನ್ ಕಿಟ್ ವಿತರಣೆ

Update: 2017-05-29 05:06 GMT

ಮಂಗಳೂರು, ಮೇ 29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲೆಯ ವತಿಯಿಂದ ಉಳ್ಳಾಲ, ಮೂಡುಬಿದಿರೆ, ಬೆಂಗರೆ, ಮುಲ್ಕಿ, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಸುಮಾರು 2 ಲಕ್ಷ ಮೌಲ್ಯದ ರಮಝಾನ್ ಕಿಟ್ ವಿತರಿಸಲಾಯಿತು.

ಮಂಗಳೂರಿನ ಕಚೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಖಾದರ್ ಕೆ., ಸಿರಾಜ್ ಕಾವೂರು, ಸದಸ್ಯರಾದ ಶರೀಫ್, ಅಬೂಬಕರ್, ಇಸ್ಮಾಯೀಲ್ ಪುತ್ತೂರು, ಸಿದ್ದೀಕ್ ಉಳ್ಳಾಲ, ಅಬೂಬಕ್ಕರ್ ಹಾಜಿ, ಇಕ್ಬಾಲ್, ಸಾದಿಕ್, ಹಾರಿಸ್ ಮಲಾರ್, ಹರ್ಶಾದ್ ಮಂಗಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News