ನಡೆದಾಡಿದ ನವಜಾತ ಶಿಶು!: ಇಂಟರ್ ನೆಟ್ ನಲ್ಲಿ ವಿಡಿಯೋ ವೈರಲ್

Update: 2017-05-29 05:37 GMT

ಹೊಸದಿಲ್ಲಿ, ಮೇ 29: ನವಜಾತ ಶಿಶುವೊಂದು ವೈದ್ಯರ ಸಹಾಯದಿಂದ ನಡೆದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಸುಮಾರು 41 ಸೆಕೆಂಡುಗಳ ಈ ವಿಡಿಯೋವನ್ನು 68 ಮಿಲಿಯನ್ ಬಾರಿ ಈಗಾಗಲೇ ವೀಕ್ಷಿಸಲಾಗಿದೆ. 1.5 ಮಿಲಿಯನ್ ಬಾರಿ ಈ ವಿಡಿಯೋ ಶೇರ್ ಆಗಿದ್ದು, 3,25,000 ಪ್ರತಿಕ್ರಿಯೆಗಳು ಸಿಕ್ಕಿವೆ.

ನರ್ಸ್ ಒಬ್ಬರ ಸಹಾಯದಿಂದ ಮಗು ಹಾಸಿಗೆಯ ಮೇಲೆ ನಡೆದಾಡುತ್ತಿರುವ ಈ ವಿಡಿಯೋವನ್ನು ಬ್ರೆಝಿಲ್ ನಿಂದ ಪೋಸ್ಟ್ ಮಾಡಲಾಗಿದೆ. ಆದರೆ ವಿಡಿಯೋ ಯಾವಾಗ ರೆಕಾರ್ಡ್ ಮಾಡಲಾಗಿತ್ತು ಎನ್ನುವುದು ಸ್ಪಷ್ಚವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುನಿವರ್ಸಿಟಿ ಆಫ್ ರಾಚ್ ಸ್ಟರ್ ಮೆಡಿಕಲ್ ಸೆಂಟರ್, ನವಜಾತ ಶಿಶು ನಡೆಯುವುದು ಆಶ್ಚರ್ಯಕಾರಿ ಸಂಗತಿಯೇನಲ್ಲ. ಕಾಲುಗಳ ನೆಲ ತಾಗುವ ಸಂದರ್ಭ ಉಂಟಾಗುವ ಪ್ರತಿಕ್ರಿಯೆ ಇದಾಗಿದೆ ಎಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News