ಬಂಟ್ವಾಳ ಕೆಳಗಿನಪೇಟೆ: ನೂತನ ಪದಾಧಿಕಾರಿಗಳ ಆಯ್ಕೆ
Update: 2017-05-29 16:25 IST
ಬಂಟ್ವಾಳ, ಮೇ 29: ಬದ್ರಿಯಾ ಮತ್ತು ಮುಹಿಯುದ್ದೀನ್ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ ಇದರ 2017-18ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಮನಾರುಲ್ ಇಸ್ಲಾಮ್ ಮದರಸದಲ್ಲಿ ಮುನೀಶ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್, ಉಪಾಧ್ಯಕ್ಷರಾಗಿ ಮುನೀಶ್ ಅಲಿ, ಮುಹಮ್ಮದ್ ಅಬೂ ನಿಶಾಮ್, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಸುಪಾರಿ, ಜೊತೆ ಕಾರ್ಯದರ್ಶಿಯಾಗಿ ಇಲ್ಯಾಸ್ ಆಲಿಯಬ್ಬ, ಜಖಾಂಚಿಯಾಗಿ ರಫೀಕ್ ಬಿ.ಕೆ., ಸದಸ್ಯರಾಗಿ ಬಿ.ಹೈದರ್ ಅಲಿ, ಫಾರೂಕ್ ಎ.ಆರ್., ಅಬ್ದುಲ್ ಲತೀಫ್, ಬಿ.ಎಂ.ಇರ್ಷಾದ್ ಅಲಿ, ಇಕ್ಬಾಲ್, ಅಹ್ಮದ್ ಶಾಫಿ, ಹಾರೂನ್ ರಶೀದ್, ಸಿದ್ದೀಕ್ ಅಬ್ದುಲ್ ಖಾದರ್, ಎ.ಮುಹಮ್ಮದ್ ಇಕ್ಬಾಲ್, ಮುಹಮ್ಮದ್, ನಾಸೀರ್ ಐ.ಬಿ.ರವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.