×
Ad

ಎಸ್ಸೆಸ್ಸೆಫ್ ಫರಂಗಿಪೇಟೆ: ರಮಝಾನ್ ಪೂರ್ವ ಸಿದ್ಧತಾ ತರಗತಿ

Update: 2017-05-29 16:35 IST

ಬಂಟ್ವಾಳ, ಮೇ 29: ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ವತಿಯಿಂದ ರಂಝಾನ್ ಪೂರ್ವ ಸಿದ್ದತಾ ತರಗತಿ ಹಾಗೂ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಪೇರಿಮಾರ್ ಮಸ್ಜಿದುಲ್ ಖಿಳ್ರ್‌ನಲ್ಲಿ ಜರಗಿತು.

ಜನತಾ ಕಾಲಾನಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಬುಖಾರಿ ಅಲ್ ಮದನಿ ತರಗತಿಯನ್ನು ನಡೆಸಿದರು. ಎಸ್ಸೆಸ್ಸೆಫ್ ಫರಂಗಿಪೇಟೆ ಅಧ್ಯಕ್ಷ ಜುನೈದ್ ಸಹದಿ ಅಲ್ ಅಫ್ಲಲಿ ವಳವೂರು, ಸೆಕ್ಟರ್ ಕಾರ್ಯದರ್ಶಿ ಸುಹೈಲ್ ತುಂಬೆ, ಖಿಳ್ರ್ ಜುಮಾ ಮಸೀದಿಯ ಖತೀಬ್ ರಫೀಕ್ ಸಹದಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News