ಕಾವು: ತುಡರ್ ಯುವಕ ಮಂಡಲದಿಂದ ಸ್ವಚ್ಛತಾ ಅಭಿಯಾನ
ಪುತ್ತೂರು, ಮೇ 29: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದಿಂದ ಸ್ವಚ್ಛತಾ ಅಭಿಯಾನ ನಡೆಯಿತು.
ಪುತ್ತೂರು-ಸುಳ್ಯ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕೌಡಿಚ್ಚಾರ್ ಸೇತುವೆ ಬಳಿಯಿಂದ ಮದ್ಲದವರೆಗೆ ಕಸ, ತ್ಯಾಜ್ಯ, ಪ್ಲಾಸ್ಟಿಕ್ ಗಳನ್ನು ತೆಗೆದು ಸ್ವಚ್ಛತೆ ಮಾಡಲಾಯಿತು.
ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ ಮಾತನಾಡಿ 7 ನೇ ವರ್ಷದಲ್ಲಿ ಕಾರ್ಯಾಚರಿಸುತ್ತಿರುವ ನಮ್ಮ ಯುವಕ ಮಂಡಲವು ಈ ಬಾರಿ ವಿಶೇಷವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದು, ಹಾಗಾಗಿ ನಮ್ಮ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಿಗೊಂದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿ ಸ್ವಚ್ಛ ಗ್ರಾಮಕ್ಕೆ ಆದ್ಯತೆ ನೀಡಲಿದ್ದೇವೆ, ಮತ್ತು ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ರಸ್ತೆ ಬದಿಯಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಸ್ವಚ್ಛತೆ ಕಡೆಗೆ ಎಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಪ್ರಧಾನ ಕಾರ್ಯದರ್ಶಿ ಗಂಗಾಧರ ನಾಯ್ಕ, ಪದಾಕಾರಿಗಳಾದ ಹರೀಶ್ ಕೆರೆಮೂಲೆ, ಭವಿತ್ ರೈ, ಶ್ರೀಕುಮಾರ್ ಬಲ್ಯಾಯ, ದಿವ್ಯಪ್ರಸಾದ್ ಎ.ಎಂ, ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ಸದಸ್ಯರಾದ ನವೀನ ನನ್ಯಪಟ್ಟಾಜೆ, ಯತೀಶ ಮದ್ಲ, ರಾಮಣ್ಣ ನಾಯ್ಕ ಆಚಾರಿಮೂಲೆ, ಧನಂಜಯ ನಾಯ್ಕ ಕುಂಞಿಕುಮೇರು, ರಾಘವ ಬಿ., ಸಂದೇಶ್ ಚಾಕೋಟೆ, ಜಗದೀಶ ನಾಯ್ಕ ಆಚಾರಿಮೂಲೆ, ಸುರೇಶ್ ಮದ್ಲ, ಸಂಕಪ್ಪ ಪೂಜಾರಿ, ಹರ್ಷ ಆಚಾರಿಮೂಲೆ, ನಿರಂಜನ ಕಾವು, ಲಿಂಗಪ್ಪ ನಾಯ್ಕ ನನ್ಯ, ದಿನೇಶ್ ಮದ್ಲ, ಶ್ಯಾಂಶ್ರವಣ್ ಮಿನೋಜಿಕಲ್ಲು, ವಿವೇಕ್ ನನ್ಯ, ಪ್ರಭಾತ್ ಪರನೀರು ಉಪಸ್ಥಿತರಿದ್ದರು.