ಬೈಕ್ ಅಪಘಾತ: ಸವಾರ ಮೃತ್ಯು
Update: 2017-05-29 20:07 IST
ಮಲ್ಪೆ, ಮೇ 29: ಮಲ್ಪೆ ಸಮೀಪ ಎರಡು ಬೈಕ್‌ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ತೆಂಕನಿಡಿಯೂರಿನ ರಾಹುಲ್ ಗಾಡ್ವಿನ್ ಎಂದು ಗುರುತಿಸಲಾಗಿದೆ. ಮೇ 27ರಂದು ಬೆಳಗ್ಗೆ ಇವರು ತನ್ನ ಸುಝುಕಿ ಸ್ವಿಸ್ ಬೈಕಿನಲ್ಲಿ ಸ್ನೇಹಿತ ತೆಂಕನಿಡಿಯೂರು ಈಶ್ವರ ನಗರದ ಪ್ರವೀಣ್ ಎಂಬವರ ಜೊತೆ ತೆಂಕನಿಡಿ ಯೂರಿನಿಂದ ಮಲ್ಪೆಕಡೆಗೆ ಹೋಗುತ್ತಿದ್ದಾಗ ಮಲ್ಪೆಯಿಂದ ಗರಡಿಮಜಲು ಕಡೆಗೆ ಬರುತ್ತಿದ್ದ ಡಿಸ್ಕವರ್ ಬೈಕ್ ಢಿಕ್ಕಿ ಹೊಡೆಯಿತು.
ಇದರಿಂದ ರಸ್ತೆಗೆ ಬಿದ್ದು ಗಾಯಗೊಂಡ ರಾಹುಲ್ ಹಾಗೂ ಪ್ರವೀಣ್ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ರಾಹುಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.