ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧ ಆದೇಶ ವಿರೋಧಿಸಿ ಮೇ 31ರಂದು ಡಿಎಂಕೆ ಪ್ರತಿಭಟನೆ
Update: 2017-05-29 20:10 IST
ಚೆನ್ನೈ, ಮೇ 29: ಹತ್ಯೆಗಾಗಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶವನ್ನು ವಿರೋಧಿಸಿ ಮೇ 31ರಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಸಂವಿಧಾನದಲ್ಲಿ ನೀಡಲಾಗಿರುವ ಆಹಾರದ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ. ಈ ನಿಷೇಧದಿಂದ ರಾಜ್ಯದ ಅಂತಿಯೂರ್ ಜಾನುವಾರು ಮಾರುಕಟ್ಟೆಯಲ್ಲಿ ವ್ಯವಹಾರ ಸ್ಥಗಿತಗೊಂಡಿದೆ. ಈ ನಿಷೇಧದ ಬಗ್ಗೆ ರಾಜ್ಯ ಸರಕಾರ ವೌನ ಧೋರಣೆ ತಳೆದಿರುವುದು ಆಕ್ಷೇಪಾರ್ಹವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಡಿಎಂಕೆ ತಿಳಿಸಿದೆ.