ಬಿಹಾರ: ಮದ್ಯ ದಾಸ್ತಾನು ತೀರುವಳಿಗೆ ಜುಲೈ 31ರವರೆಗೆ ಅವಕಾಶ ನೀಡಿದ ಸುಪ್ರೀಂ
Update: 2017-05-29 20:18 IST
ಹೊಸದಿಲ್ಲಿ, ಮೇ 29: ತಮ್ಮಲ್ಲಿರುವ ದಾಸ್ತಾನುಗಳನ್ನು ಜುಲೈ 31ರ ಒಳಗೆ ರಾಜ್ಯದಿಂದ ಹೊರಗೆ ಮಾರಾಟ ಮಾಡಿ ತೀರುವಳಿ ಮಾಡಿಕೊಳ್ಳುವಂತೆ ಬಿಹಾರದ ಮದ್ಯ(ಸಾರಾಯಿ) ಉತ್ಪಾದಕರು ಮತ್ತು ಮಾರಾಟಗಾರರಿಗೆ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ.
ಇಂಡಿಯನ್ ಆಲ್ಕೊಹಾಲಿಕ್ ಬೆವರೇಜ್ ಸಂಸ್ಥೆಗಳ ಸಂಘಟನೆ ನೀಡಿದ ಮನವಿಪತ್ರವನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ರಜಾಕಾಲದ ಪೀಠವು ಈ ಆದೇಶ ನೀಡಿದೆ. ಸುಮಾರು 200 ಕೋಟಿ ರೂ.ಗೂ ಹೆಚ್ಚಿನ ಮದ್ಯದ ದಾಸ್ತಾನು ಇದ್ದು ಇದನ್ನು ತೀರುವಳಿ ಮಾಡದಿದ್ದರೆ ತಮಗೆ ಭಾರೀ ನಷ್ಟವಾಗಲಿದೆ ಎಂದು ಸಂಘಟನೆ ಮನವಿ ಸಲ್ಲಿಸಿತ್ತು.ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರ 2016ರ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಸಾರಾಯಿ ನಿಷೇಧಿಸಿ ಆದೇಶ ಹೊರಡಿಸಿತ್ತು.