ಸಿಬಿಎಸ್‌ಇ: ಲಿಟ್ಲ್‌ರಾಕ್ ಶಾಲೆಗೆ ಶೇ.100 ಫಲಿತಾಂಶ
ಬ್ರಹ್ಮಾವರ, ಮೇ 29: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್‌ಇ) ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಹಿಂದಿನ ವರ್ಷಗಳಂತೆ ಈ ವರ್ಷವೂ ಸಹ ಉತ್ತಮ ಫಲಿತಾಂಶವನ್ನು ಕಾಯ್ದುಕೊಂಡಿದೆ.
ವಿಜ್ಞಾನ ವಿಭಾಗದಿಂದ ಪರೀಕ್ಷೆ ಬರೆದ ಎಲ್ಲಾ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ದಾಖಲೆಯ ಶೇ.100 ಫಲಿತಾಂಶವನ್ನು ದಾಖಲಿಸಿದೆ. ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಯಾ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.
ಜೀವಶಾಸ್ತ್ರ ವಿಭಾಗದಲ್ಲಿ ವಿವೇಕ್ ನಾಯಕ್ ಎಂ. ಶೇ.97.8 ಅಂಕ ಗಳಿಸಿ ಅಗ್ರಸ್ಥಾನಿಯಾದರೆ, ಕಂಪ್ಯೂಟರ್ ವಿಭಾಗದಲ್ಲಿ ಕಾರ್ತಿಕ್ ರಾವ್ ಎಂ. ಶೇ. 96.6 ಅಂಕ ಗಳಿಸಿದ್ದಾರೆ.
37 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ್ದು, 13 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ+ ಶ್ರೇಣಿಯನ್ನು ಪಡೆದಿದ್ದಾರೆ ಎಂದು ಶಾಲೆಯ ನೂತನ ಪ್ರಾಂಶುಪಾಲರಾದ ಡಾ.ಜಾನ್ ಥಾಮಸ್ ತಿಳಿಸಿದ್ದಾರೆ.
ಜೀವಶಾಸ್ತ್ರ ವಿಭಾಗದಲ್ಲಿ ವಿವೇಕ್ ನಾಯಕ್ ಎಂ. ಶೇ.97.8 ಅಂಕಗಳಿಸಿ ಅಗ್ರಸ್ಥಾನಿಯಾದರೆ, ಕಂಪ್ಯೂಟರ್ ವಿಭಾಗದಲ್ಲಿ ಕಾರ್ತಿಕ್ ರಾವ್ ಎಂ. ಶೇ. 96.6 ಅಂಕ ಗಳಿಸಿದ್ದಾರೆ. 37 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ್ದು, 13 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ+ ಶ್ರೇಣಿಯನ್ನು ಪಡೆದಿದ್ದಾರೆ ಎಂದು ಶಾಲೆಯ ನೂತನ ಪ್ರಾಂಶುಪಾಲರಾದ ಡಾ.ಜಾನ್ ಥಾಮಸ್ ತಿಳಿಸಿದ್ದಾರೆ.
ಈ ಅತ್ಯುತ್ತಮ ಫಲಿತಾಂಶದ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರನ್ನು ಲಿಟ್ಲ್ ರಾಕ್ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.