ಮಲ್ಪೆಯಲ್ಲಿ ತಪ್ಪಿದ ಅನಾಹುತ: ನೀರು ಪಾಲಾಗಲಿದ್ದ ಕ್ರೇನ್

Update: 2017-05-29 15:13 GMT

ಉಡುಪಿ, ಮೇ 29: ಬೋಟೊಂದರ ಇಂಜಿನ್ ಇಳಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕ್ರೇನ್ ನೀರಿಗೆ ಉರುಳಿ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ.

ಮೀನುಗಾರಿಕಾ ಬಂದರು ಮಲ್ಪೆಯ ಪಡುಕೆರೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟ್ ನ ಇಂಜಿನನ್ನು ದುರಸ್ಥಿಗಾಗಿ ಭಾರಿ ಗಾತ್ರದ ಕ್ರೇನ್ ಮೂಲಕ ಇಳಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕ್ರೇನ್ ನೀರಿಗೆ ಜಾರಿ ಒಂದು ಬದಿಯ ಎಲ್ಲಾ ಚಕ್ರಗಳು ಮೇಲೆದ್ದಿದ್ದವು. ಈ ಸಂದರ್ಭದಲ್ಲಿ ಕ್ರೇನ್ ನ ಮುಂಭಾಗದ ಬೂಮ್ ಉದ್ದನೆ ಚಾಚಿಕೊಂಡಿದ್ದ ಕಾರಣ ಹತ್ತಿರ ಬೋಟೊಂದಕ್ಕೆ ಅಡ್ಡಲಾಗಿ ತಾಗಿ ನಿಂತ ಕಾರಣ ಕ್ರೇನ್ ಸಂಪೂರ್ಣವಾಗಿ ನೀರಿಗೆ ಬೀಳುವುದರಿಂದ ಬಚವಾಗಿದೆ.

ತಕ್ಷಣ ಸಹಾಯಕ್ಕಾಗಿ ಇತರ ಮೂರು ಕ್ರೇನ್ ಗಳನ್ನು ಕರೆಸಿ, ಉರುಳಿ ಬೀಳಲಿದ್ದ ಕ್ರೇನನ್ನು ಮೇಲಕ್ಕೆತ್ತಿ ರಕ್ಷಿಸಿದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News