×
Ad

ಐಸಿಎಸ್ಇ ಹತ್ತನೇ ತರಗತಿ ಪರೀಕ್ಷೆ: ಗ್ರೀನ್ ವ್ಯಾಲಿಗೆ ಸತತ ಹತ್ತನೇ ವರ್ಷ 100% ಫಲಿತಾಂಶ

Update: 2017-05-29 20:56 IST

ಶಿರೂರು, ಮೇ 29 : ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗು ಪಿಯು ಕಾಲೇಜು ಈ ಬಾರಿಯ ಐಸಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆಯುವ ಮೂಲಕ ಸತತ ಹತ್ತನೇ ವರ್ಷ ಈ ಫಲಿತಾಂಶ ಪಡೆದು ವಿಶೇಷ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 66 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗು 42 ವಿದ್ಯಾರ್ಥಿಗಳು ಉನ್ನತ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 
 
ಶಾಲೆಯಲ್ಲಿ  ಪ್ರಥಮ ಸ್ಥಾನಿ ಸನ್ಮಯೀ ಎಸ್  ಒಟ್ಟು 484 ಅಂಕ (96.8 %) ಗಣಿತ, ವಿಜ್ಞಾನ, ಇತಿಹಾಸ ಹಾಗು ಭೂಗೋಳದಲ್ಲಿ 99% ಅಂಕ ಗಳಿಸಿದ್ದಾರೆ.  

ಶಬ್ರೋಝ್ ಶೇಖ್ ಒಟ್ಟು 463 (92.6 %) ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಶಾಂತಿಕ ಹಾಗು ಸಮ್ಹಾ ಅತುಫ್ ಮೌಲಾನಾ  ಒಟ್ಟು 461 (92.2 %) ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.    

ಉನ್ನತ ಪ್ರಥಮ ದರ್ಜೆ ಹಾಗು ವಿಶಿಷ್ಟ ಶ್ರೇಣಿ ಪಡೆಯುವಲ್ಲಿ ಈ ಬಾರಿ ಗ್ರೀನ್ ವ್ಯಾಲಿ ವಿದ್ಯಾರ್ಥಿಗಳು ಸಾರ್ವಕಾಲಿಕ ದಾಖಲೆ ಮಾಡಿದ್ದಾರೆ ಎಂದು ಸಂಸ್ಥೆಯ ಪ್ರಕರಣೆ ತಿಳಿಸಿದೆ. 

ವಿಶಿಷ್ಟ ಶ್ರೇಣಿ ಪಡೆದವರು: 

ಸನ್ಮಯೀ ಎಸ್ 96.8%

ಶಬ್ರೋಝ್  ಶೇಖ್ 92.6%

ಶಾಂತಿಕ 92.2%

ಸಮ್ಹಾ ಅತುಫ್ ಮೌಲಾನಾ  92.2%

ಕಾಲಿಡ ಆಶೆಲ್ ಮಥಾಯಸ್   91.6%

ಅಬ್ರಾರ್ ಕಚಾರಿ  90.8%

ಜಲಜ ನಾಗೇಶ್ ನಾಯಕ್  90%

ಸೈಯದ್ ಝೋಐಬ್  90%

ಆಕಾಂಕ್ಷ ಶಿವಪ್ರಕಾಶ್ ಹಿರೇಮಠ್ 89.6%

ಅಮನ್ ಮುರುಡೇಶ್ವರ್  88.4%

ಮಾನಸಿ ವರ್ಮಾ  87.4%
ಸಾಲೆ ಸಲ್ಮಾನ್ ಜುಬಾಪು  87%
ಸಾರಂಗ್ ಮುಹಮ್ಮದ್ ಸಲೀಫ್ 86.8%
ಫೌಝಿಯಾ ಬೇಗಂ ಪಿಪಿ  86.6%
ನೌಮಾನ್ ನವೀದ್ ಅಹ್ಮದ್  86.2%
ಆಯಿಷಾ ನಿಸ್ ಫಾತ್ 85.2%
ಆಯಿಷಾ ಸರಿಯಾ ಮನೆಗಾರ್  85%
ಮುಹಮ್ಮದ್ ದಾ ಮಿಸ್  85%

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News