ಅಮೆರಿಕ ವೀಸಾ ಪಡೆದ ಭಾರತೀಯರ ಸಂಖ್ಯೆಯಲ್ಲಿ ಶೇ. 28 ಏರಿಕೆ

Update: 2017-05-29 15:59 GMT

   ಇಸ್ಲಾಮಾಬಾದ್, ಮೇ 29: ನೂತನ ಟ್ರಂಪ್ ಆಡಳಿತದಲ್ಲಿ ಪಾಕ್ ರಾಷ್ಟ್ರೀಯ ರಿಗೆ ನೀಡಲಾಗುತ್ತಿದ್ದ ವೀಸಾದ ಪ್ರಮಾಣದಲ್ಲಿ ಶೇ. 40ರಷ್ಟು ಇಳಿಕೆಯಾಗಿದೆ. ಕುತೂಹಲಕಾರಿಯೆಂದರೆ, ಈ ವರ್ಷದ ಮಾರ್ಚ್‌ಹಾಗೂ ಎಪ್ರಿಲ್‌ನಲ್ಲಿ ಭಾರತೀಯರಿಗೆ ನೀಡಲಾದ ವಲಸಿಗಯೇತರ (ನಾನ್-ಇಮಿಗ್ರೆಂಟ್) ಅಮೆರಿಕ ವೀಸಾದ ಪ್ರಮಾಣದಲ್ಲಿ ಶೇ.28ರಷ್ಟು ಏರಿಕೆಯಾಗಿದೆ.

   2016ರ ಮಾಸಿಕ ಸರಾಸರಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಪಾಕಿಸ್ತಾನಿಯರಿಗೆ ನೀಡಲಾದ ವಲಸಿಗಯೇತರ ವೀಸಾಗಳ ಪ್ರಮಾಣದಲ್ಲಿ ಶೇ. 40ರಷ್ಟು ಇಳಿಕೆಯಾಗಿರುವುದಾಗಿ ಪಾಕಿಸ್ತಾನದ ಸುದ್ದಿಸಂಸ್ಥೆಯೊಂದು ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿದ ದತ್ತಾಂಶಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

     ಪಾಕ್ ಪ್ರಜೆಗಳಿಗೆ ಈ ವರ್ಷದ ಎಪ್ರಿಲ್ ಹಾಗೂ ಮಾರ್ಚ್‌ನಲ್ಲಿ ಕ್ರಮವಾಗಿ 3925 ಹಾಗೂ 3973 ಮಂದಿ ವಲಸಿಗಯೇತರ ಅಮೆರಿಕ ವೀಸಾಗಳನ್ನು ನೀಡಲಾಗಿತ್ತು . ಕಳೆದ ವರ್ಷ ಒಬಾಮ ಆಡಳಿತವು ಪಾಕ್ ರಾಷ್ಟ್ರೀಯರಿಗೆ ಮಾಸಿಕ ಸರಾಸರಿ 6553ರಂ,ೆ ಒಟ್ಟು 78637 ವಲಸಿಗಯೇತರ ವೀಸಾಗಳನು ನೀಡಿದ್ದು, ಇದು ಹಾಲಿ ವರ್ಷದ ಸರಾಸರಿಗಿಂತ ಶೇ.40ರಷ್ಟು ಅಧಿಕವಾಗಿದೆ.

ಭಾರತೀಯರಿ ಈ ವರ್ಷದ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಕ್ರಮವಾಗಿ 87,049 ಹಾಗೂ 97,925 ವಲಸಿಗಯೇತರ ವೀಸಾಗಳು ದೊರೆತಿದೆ. ಕಳೆದ ವರ್ಷ ಪ್ರತಿ ತಿಂಗಳೂ ಭಾರತೀಯರು ಸರಾಸರಿ 72, 082ರಂತೆ ಒಟ್ಟು 8,64,987 ವೀಸಾಗಳನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News