×
Ad

ಅಪಾಯಕಾರಿ ಸ್ಥಿತಿಯಲ್ಲಿ ಪೆರ್ಡೂರು ಪುತ್ತಿಗೆ ಸೇತುವೆ

Update: 2017-05-29 21:40 IST

ಹಿರಿಯಡ್ಕ, ಮೇ 29: ಉಡುಪಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರುವ ಪ್ರಮುಖ ಪೆರ್ಡೂರು ಪುತ್ತಿಗೆ ಸೇತುವೆಯು ಇದೀಗ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೇತುವೆಯ ಅಡಿಪಾಯಕ್ಕೆ ಹಾಕಿದ ಜೆಲ್ಲಿಯ ಬೆಡ್ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿರುವುದು ಕಂಡುಬಂದಿದೆ.

ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಯಾಗಿರುವ ಈ ಸೇತುವೆಯನ್ನು ಅಂದಿನ ಮದ್ರಾಸ್ ಸರಕಾರ ನಿರ್ಮಿಸಿದ್ದು, ಇದರ ಉದ್ಘಾಟನೆಯನ್ನು 1952 ನ.22ರಂದು ನೆರವೇರಿಸಲಾಗಿತ್ತು. ಈ ಸೇತುವೆಯ ಮೇಲೆ ದಿನನಿತ್ಯ ಎರಡು ಜಿಲ್ಲೆಗಳ ನೂರಾರು ವಾಹನಗಳು ಸಂಚ ರಿಸುತ್ತಿರುತ್ತವೆ. ಇದೀಗ ಸೇತುವೆ ತಳಮಟ್ಟದ ಅಡಿಪಾಯಕ್ಕೆ ಹಾಕಿದ ಜೆಲ್ಲಿಯ ಬೆಡ್ ಸುಮಾರು 2 ಅಡಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದೆ. ಈ ಬಾರಿ ಸ್ವರ್ಣಾ ನದಿಯ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ಸೇತುವೆಯ ತಳಮಟ್ಟ ಗೋಚರಿಸಿದೆ.

ಸೇತುವೆಯ ಮೇಲ್ಭಾಗದ ಮಧ್ಯದಲ್ಲಿ ಬಿರುಕು ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅತಿ ಭಾರದ ವಾಹನಗಳು ಇದರಲ್ಲಿ ಸಂಚರಿಸುವುದು ಅಪಾಯ ಕಾರಿ. ‘ಇಲಾಖಾಧಿಕಾರಿಗಳು ಈ ಸೇತುವೆ ತಳಮಟ್ಟವನ್ನು ಪರಿಶೀಲಿಸಿ ಸೂಕ್ತ ಸಮಯದಲ್ಲಿ ಕಾಮಗಾರಿ ನಡೆಸಿದರೆ ಮುಂದಿನ ದಿನಗಳಲ್ಲಿ ಸೇತುವೆ ಮುರಿದು ಹೋಗುವುದನ್ನು ತಪ್ಪಿಸಬಹುದು’ ಎಂದು ಸ್ಥಳೀಯ ಪುತ್ತಿಗೆ ನಿವಾಸಿ ಮಟ್ಟಿಬೈಲ್ ಸುಧಾಕರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇೆಟ್ಟು, ಜಯಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News