×
Ad

ಅಂತಃವ್ಯಾಪ್ತ ಕಾಂಕ್ರೀಟು ನೆಲೆಹಾಸಿನ ಕುರಿತು ಅಧ್ಯಯನ

Update: 2017-05-29 21:42 IST

ಶಿರ್ವ, ಮೇ 29: ಅಂತಃವ್ಯಾಪ್ತಿ ಕಾಂಕ್ರೀಟು ವ್ಯವಸ್ಥೆ ಮತ್ತು ಅದರ ಸಾಮರ್ಥ್ಯವು ಅಂತಃವ್ಯಾಪ್ತಿ ಕಾಂಕ್ರೀಟಿನ ಸಂಕುಚನ ಸಾಮರ್ಥ್ಯ ಮತ್ತು ಅದರ ಕೆಳಗಿರುವ ಮಣ್ಣಿನ ಸಾಮರ್ಥ್ಯವನ್ನು ಅವಲಂಬಿಸಿದ್ದು, ಈ ನಿಟ್ಟಿನಲ್ಲಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯ ರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಯೋಗಾತ್ಮಕ ಅಧ್ಯ ಯನವನ್ನು ನಡೆಸಿದ್ದಾರೆ.

ಕಾಂಕ್ರೀಟಿನ ಸಾಮರ್ಥ್ಯವು ಅವಲಂಬಿಸಿರುವ ವಿವಿಧ ಮಾನದಂಡಗಳ ಬಗ್ಗೆ ಅಧ್ಯಯನ ನಡೆಸಿರುವ ಇವರು, ಕಾಂಕ್ರೀಟಿನಲ್ಲಿ ನೀರು, ಹಾರುಬೂದಿ, ಜಲ್ಲಿ ಮತ್ತು ಸಿಮೆಂಟುಗಳ ಸಮತೋಲನವನ್ನು ಕಂಡು ಹಿಡಿದು ಆ ಮೂಲಕ ಕಾಂಕ್ರೀಟಿನ ಸಾಮರ್ಥ್ಯ ಮತ್ತು ಅಂತಃಪ್ರವೇಶ ಸಾಧ್ಯತೆಗಳನ್ನು ಹೆಚ್ಚಿಸುವ ವಿಧಾನ ಕಂಡುಹಿಡಿದಿದ್ದಾರೆ.

ಕಾಂಕ್ರೀಟಿನ ಸಾಮರ್ಥ್ಯವು ಅವಲಂಬಿಸಿರುವ ವಿವಿಮಾನದಂಡಗಳ ಬಗ್ಗೆ ಅದ್ಯಯನ ನಡೆಸಿರುವ ಇವರು, ಕಾಂಕ್ರೀಟಿನಲ್ಲಿ ನೀರು, ಹಾರುಬೂದಿ, ಜಲ್ಲಿ ಮತ್ತು ಸಿಮೆಂಟುಗಳ ಸಮತೋಲನವನ್ನು ಕಂಡು ಹಿಡಿದು ಆ ಮೂಲಕ ಕಾಂಕ್ರೀಟಿನ ಸಾಮರ್ಥ್ಯ ಮತ್ತು ಅಂತಃಪ್ರವೇಶ ಸ್ಯಾತೆಗಳನ್ನುಹೆಚ್ಚಿಸುವವಿಾನ ಕಂಡುಹಿಡಿದಿದ್ದಾರೆ. ಅಲ್ಲದೇ ಈ ವಿಧಾನವನ್ನು ಬಳಸಿ ತಯಾರಿಸಿರುವ ನೆಲಹಾಸು ಅನನ್ಯವಾದ ಮಾದರಿಯಾಗಿದ್ದು, ಮಳೆನೀರನ್ನು ಸಂಗ್ರಹಿಸಿ ನೆಲದೊಳಗೆ ಇಳಿಯುವಂತೆ ಮಾಡುತ್ತದೆ. ಆ ಮೂಲಕ ಪರಿಸರದ ವರ್ತಮಾನದ ಅಗತ್ಯಕ್ಕೆ ಪೂರಕವಾಗಿದೆ. ಭೇದ್ಯ ಕಾಂಕ್ರೀಟಿನಿಂದ ನಿರ್ಮಿಸಿದ ನೆಲಹಾಸು ನೀರನ್ನು ತನ್ನ ಮೂಲಕ ಹರಿದು ಹೋಗಲು ಅನುವು ಮಾಡಿಕೊಡುತ್ತದೆ. ಆ ಮೂಲಕ ನೀರು ಅಂತರ್ಜಲ ವಾಗಿ ಶೇಖರಗೊಳ್ಳುತ್ತದೆ.

ಹೀಗೆ ಫ್ರೀಯಟಿಕ್ ವಲಯದಲ್ಲಿ ನೀರು ಪುನರಾ ವೇಶನಗೊಳ್ಳುತ್ತದೆ. ಪರಿಸರ, ಸುರಕ್ಷತೆ, ಮತ್ತು ಆರ್ಥಿಕ ದೃಷ್ಟಿಯಿಂದ ಭೇದ್ಯ ಕಾಂಕ್ರೀಟು ಉಪಯುಕ್ತವಾಗಿದೆ.

ರಸ್ತೆ, ಕಾಲುದಾರಿಗಳು, ವಸತಿ ಸಮುಚ್ಚಯಗಳ ರಸ್ತೆಗಳು, ವಾಹನ ನಿಲ್ದಾಣಗಳು, ಈಜುಕೊಳಗಳು, ಟೆನಿಸ್ ಅಂಗಣಗಳಲ್ಲಿ ಈ ನೆಲಹಾಸನ್ನು ಬಳಸ ಬಹುದಾಗಿದೆ. ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರದೀಪ್ ಕೆ.ಎಂ., ಪುನೀತ್ ಕುಮಾರ್, ಲಕ್ಷ್ಮೀ ಎಂ.ಬಿ., ಚೈತ್ರ ಕರ್ಣಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾಯೋಜಕತ್ವದಲ್ಲಿ ಈ ಅಧ್ಯಯನ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News