ರಮಝಾನ್ ಪ್ರಭಾಷಣ
Update: 2017-05-29 22:02 IST
ಮಂಗಳೂರು, ಮೇ 29: ನಗರದ ಪೊಲೀಸ್ ಲೇನ್‌ನಲ್ಲಿರುವ ಫೌಝೀ ಜುಮಾ ಮಸೀದಿಯಲ್ಲಿ ರಮಝಾನ್ ಪ್ರಭಾಷಣ ನಡೆಯಲಿದೆ ಎಂದು ಮಸೀದಿಯ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ.
ಮೇ 30ರಿಂದ ಜೂ. 1ರವರೆಗೆ ಚೊಕ್ಕಬೆಟ್ಟು ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮೂಡಿಗೆರೆ, ಜೂ 2ರಂದು ಲೇನ್ ಮಸೀದಿಯ ಖತೀಬ್ ಅಬ್ದುಲ್ ವಫಾ ಕೆ. ಖಾಸಿಂ ಮುಸ್ಲಿಯಾರ್ ಬಂಡಾಡಿ, 3ರಂದು ಮಂಗಳೂರು ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾ ಫೈಝಿ, 4ರಂದು ಕಳಂಜಿಬೈಲ್ ಖತೀಬ್ ಅಬ್ದುಲ್ ಹಮೀದ್ ಸಅದಿ ರಮಝಾನ್ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.