ದೇಶದ ಅರ್ಧಾಂಶಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ: ಅಲ್ಪಸಂಖ್ಯಾತ ಆಯೋಗದ ಸದಸ್ಯ ಜಾರ್ಜ್ ಕುರಿಯನ್

Update: 2017-05-30 07:58 GMT

ಹೊಸದಿಲ್ಲಿ,ಮೇ 30: ದೇಶದ ಜನಸಂಖ್ಯೆಯಲ್ಲಿ ಅರ್ಧಾಂಶಕ್ಕೂ ಹೆಚ್ಚು ಮಾಂಸಾಹಾರ ಸೇವಿಸುವವರು ಎಂದು ಕೇಂದ್ರ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಜಾರ್ಜ್ ಕುರಿಯನ್ ಹೇಳಿದ್ದಾರೆ. ದೇಶದಲ್ಲಿ ಶೇ. 20ರಷ್ಟು ಅಲ್ಪಸಂಖ್ಯಾತರಿದ್ದಾರೆ .ಆದರೆ ಇವರ ಸಂಖ್ಯೆಗಿಂತ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೇಂದ್ರಸರಕಾರದ ಜಾನುವಾರು ಅಧಿಸೂಚನೆಯಿಂದ ಮಾಂಸಾಹಾರ ಸಮಸ್ಯೆ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೃಷ್ಟಿಯಾಗಿಲ್ಲ ಎಂದು ಕುರಿಯನ್ ಹೇಳಿದ್ದಾರೆ.

ಅವರು ಅಲ್ಪಸಂಖ್ಯಾತ ಆಯೋಗದ ಸದಸ್ಯರಾಗಿ ಸೋಮವಾರ ಅಧಿಕಾರವಹಿಸಿಕೊಂಡ ಬಳಿಕ ಪತ್ರಕರ್ತರೊಂದಿಗೆ ಮಾತಾಡುತ್ತಾ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕೇಂದ್ರಸರಕಾರ ಅಧಿಸೂಚನೆಯನ್ನು ಕೇರಳ ಸಹಿತ ಬೇರೆ ರಾಜ್ಯಗಳು ವಿರೋಧಿಸುತ್ತಿವೆ. ಆದರೆ ಸಂವಿಧಾನದ ಏಳನೆ ಪರಿಚ್ಚೇಧದ 15ನೆ ಕಲಂ ಪ್ರಕಾರ ತಮಗೆ ಅಗತ್ಯವಿರುವ ಕಾನೂನುಗಳನ್ನು ನಿರ್ಮಿಸುವ ಅಧಿಕಾರ ರಾಜ್ಯಗಳಿವೆ. ಈ ಅಧಿಕಾರವನ್ನು ಬಳಸಿ ಕೇರಳ ತನಗೆ ಬೇಕಾದ ಕಾನೂನುಗಳನ್ನು ರೂಪಿಸಬಹುದು ಎಂದು ಕುರಿಯನ್ ಹೇಳಿದ್ದಾರೆ. ಈ ಶೆಡ್ಯೂಲ್‌ನ ಆಧಾರದಲ್ಲಿಯೇ ಕೃಷಿಯೇತರ ಉದ್ದೇಶಗಳಿಗಾಗಿ ಜಾನುವಾರು ಸಂತೆ ನಡೆಸಬಹುದಾಗಿದೆ. ಆದ್ದರಿಂದ ಕೇರಳದಲ್ಲಿ ಕೃಷಿಯೇತರ ಆವಶ್ಯಕತೆಗಳಿಗಾಗಿ ಜಾನುವಾರು ಸಂತೆ ಆರಂಭಿಸಬಹುದುಎಂದುಅವರು ಹೇಳಿದ್ದಾರೆ. ಕೇರಳಕ್ಕೆ ಜಾನುವಾರುಗಳನ್ನು ತಮಿಳ್ನಾಡು, ಕರ್ನಾಟಕದಿಂದ ತರಲಾಗುತ್ತಿದೆ. ಅದು ಅಲ್ಲಿನ ರೈತರಿಗೆ ಉಪಯೋಗಕ್ಕೆ ಬಾರದ ಜಾನುವಾರುಗಳು. ಆದ್ದರಿಂದ ಈ ಮೂರು ರಾಜ್ಯಗಳಿಗೂ ಪರಸ್ಪರ ಸಮಾಲೋಚಿಸಿ ಕೃಷಿಯೇತರ ಜಾನುವಾರು ಸಂತೆ ಅರಂಭಿಸಲು ಅನುವಾಗುವಂತೆ ಕಾನೂನು ರೂಪಿಸಲು ಸಾಧ್ಯವಿದೆ ಎಂದು ಕುರಿಯನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News