ಪೆರ್ಮುದೆ: ಪಾಪ್ಯುಲರ್ ಫ್ರಂಟ್ ವತಿಯಿಂದ ಪುಸ್ತಕ ವಿತರಣೆ
Update: 2017-05-30 13:45 IST
ಮಂಗಳೂರು, ಮೇ 30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಟ್ರಕೆರೆ ವಲಯದ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಸೋಮವಾರ ಪೆರ್ಮುದೆಯ ಉರ್ದು ಶಾಲೆಯಲ್ಲಿ ಜರಗಿತು.
ಪಿ.ಎಫ್.ಐ. ಬಟ್ರಕೆರೆ ವಲಯ ಕಾರ್ಯದರ್ಶಿ ಜೆ.ಕೆ.ಬಶೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಜ್ಪೆಡಿವಿಷನ್ ಅಧ್ಯಕ್ಷ ಎ.ಕೆ.ಅಶ್ರಫ್, ಊರ ದಾನಿಗಳಾದ ಮೊಯ್ದಿನ್ ಸಾಬ್, ಚೆಯ್ಯಿಕ, ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಕೋಮಲ್ ಮುಫ್ತಿ, ಪೆರ್ಮುದೆ ಗ್ರಾಪಂ ಸದಸ್ಯ ಸಾದಿಕ್, ಎಕ್ಕಾರು ಗ್ರಾಪಂ ಸದಸ್ಯ ಮೊಯ್ದಿನ್ ಖಾನ್, ಸುಂಕದಕಟ್ಟೆ ಏರಿಯಾ ಕಾರ್ಯದರ್ಶಿ ರಹ್ಮತುಲ್ಲಾ, ಏರಿಯಾ ಸದಸ್ಯ ಯಹ್ಯಾ, ನವಾಝ್ ಉಪಸ್ಥಿತರಿದ್ದರು.